ಮನೆ ರಾಜ್ಯ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆ

0

ನವದೆಹಲಿ(Newdelhi): ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ₹25.5ರಷ್ಟು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರ ಇಳಿಕೆ ಮಾಡಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆಗಿರುವುದರಿಂದ ಈ ಪರಿಷ್ಕರಣೆ ಮಾಡಲಾಗಿದೆ.

ಇದರಿಂದಾಗಿ ದೆಹಲಿಯಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ 1,885 ರೂ. ರಿಂದ 1,859 ರೂ. ಗಳಿಗೆ ಇಳಿಕೆಯಾಗಿದೆ.

ಕೋಲ್ಕತ್ತದಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ  1,995.5 ರೂ. ರಿಂದ  1,959 ರೂ. ಆಗಿದ್ದರೆ, ಮುಂಬೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ  1,844  ರೂ ಗಳಿಂದ  1,811.50 ರೂ. ಮತ್ತು ಚೆನ್ನೈನಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ  2,009.50 ರೂ. ಬೆಂಗಳೂರಿನಲ್ಲಿ 2100.0 ರೂ. ಇಳಿಕೆ ಆಗಿದೆ.

ಸ್ಥಳೀಯ ವ್ಯಾಟ್‌ಗೆ ಅನುಗುಣವಾಗಿ ಸಿಲಿಂಡರ್ ದರ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.