ಮಂಡ್ಯ: ಜಿಲ್ಲೆಯಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ಪ್ರತಿಭಟನೆಯ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ ವಿದ್ಯಾರ್ಥಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ ಮುಸ್ಲಿಂ ಸಂಘಟನೆ ಜಮೀಯತ್ ಉಲೇಮಾ – ಎ – ಹಿಂದ್ ವಿರುದ್ಧ ಮಂಡ್ಯ ಪೊಲೀಸರಿಗೆ ನರೇಂದ್ರ ಮೋದಿ ವಿಚಾರ ಮಂಚ್ ದೂರು ನೀಡಿದೆ.
ನರೇಂದ್ರ ಮೋದಿ ವಿಚಾರ್ ಮಂಚ್ ವೇದಿಕೆ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಸೇರಿದಂತೆ ಕಾರ್ಯಕರ್ತರು ಇಂದು ಮಂಡ್ಯ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದು, ಈ ಹಿಜಾಬ್ ಪ್ರಕರಣದ ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜಿಲ್ಲೆಯ ಪಿಇಎಸ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿ ಮುಸ್ಕಾನ್ ಖಾನ್ ಬುರ್ಕಾ ಧರಿಸಿದ್ದಕ್ಕಾಗಿ ಹತ್ತಾರು ವಿದ್ಯಾರ್ಥಿಗಳು ಅವಳನ್ನು ಹಿಂಬಾಲಿಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದು, ಅದಕ್ಕೆ ಪ್ರತಿಯಾಗಿ ‘ಅಲ್ಲಾ ಹು ಅಕ್ಬರ್’ ತಿ ಘೋಷಣೆ ಕೂಗಿ ಪ್ರತಿರೋಧ ತೋರಿಸಿದ್ದರು.
ಈ ವಿಡಿಯೋ ವೈರಲ್ ಆದ ನಂತರ ಘೋಷಣೆ ಕೂಗಿದ ವಿದ್ಯಾರ್ಥಿನಿ ಪ್ರತಿಕ್ರಿಯೆ ನೀಡಿದ್ದು, ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು, ನಾನು ಅಲ್ಲಾ ಹು ಅಕ್ಬರ್ ಎಂದು ಕೂಗಿದೆ ಇದರಲ್ಲಿ ನಂದೂ ತಪ್ಪಿಲ್ಲ, ಅವರದ್ದೂ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.