ಮನೆ ರಾಜ್ಯ ನಾಡಹಬ್ಬ ದಸರಾ: ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮವನ್ನು ‘ಸವಾಲ್ ಟಿವಿ’ ಲೈವ್ ನಲ್ಲಿ ವೀಕ್ಷಿಸಿ

ನಾಡಹಬ್ಬ ದಸರಾ: ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮವನ್ನು ‘ಸವಾಲ್ ಟಿವಿ’ ಲೈವ್ ನಲ್ಲಿ ವೀಕ್ಷಿಸಿ

0

ಮೈಸೂರು(Mysuru):  ವಿಶ್ವವಿಖ್ಯಾತ  ನಾಡಹಬ್ಬ ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಅಧಿದೇವತೆ ಚಾಮುಂಡೇಶ್ವರಿ ಮೂರ್ತಿ ಇರುವ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಜಂಬೂಸವಾರಿ ಮತ್ತು ನಾಡಿನ ಕಲೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತರಾಗಿದ್ದಾರೆ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36-2.50ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ಸಂಜೆ 5.07-ದ 5.18ರವರೆಗೆ ಶುಭ ಮೀನ ಲಗ್ನದಲ್ಲಿ ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಕೊಡಲಿದ್ದಾರೆ.

ಪಂಜಿನ ಕವಾಯತು: ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ಸವಾಲ್ ಟಿವಿ ಯೂಟ್ಯೂಬ್ ಚಾನೆಲ್ https://www.youtube.com/channel/UCmDoYGj_oDaxpT_t7Pa9iEQ ಲೈವ್ ನಲ್ಲಿ ವೀಕ್ಷಿಸಿ.