ಮನೆ ರಾಜ್ಯ ಆನೆಗೆ ಗಾಯ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ

ಆನೆಗೆ ಗಾಯ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ

0

ಬೆಂಗಳೂರು: ನಾಗರಹೊಳೆ ಅರಣ್ಯದಲ್ಲಿ    ಆನೆ ಮತ್ತು ಅದರ ಮರಿಗೆ ಬಾಲ ಮತ್ತು ಸೊಂಡಿಳಲ್ಲಿ ಗಾಯವಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಈ ಬಗ್ಗೆ ಸ್ಪಂದಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನಾಗರಹೊಳೆ ಅರಣ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಗಮನಿಸಿದ್ದು,  ಇನ್ನು ಅರ್ಧ ಗಂಟೆಯ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಆನೆಗಳಿಗೆ ಏನೆಲ್ಲಾ ಚಿಕಿತ್ಸೆ ನೀಡಬಹುದು  ಎಂದು ಪರಿಶೀಲನೆ ಮಾಡಲಾಗುವುದು. ಅವರು ಗಮನಕ್ಕೆ ತಂದಿರುವ ವಿಷಯದ ಬಗ್ಗೆ ಸ್ಪಂದಿಸಲಾಗುವುದು ಹಾಗೂ  ಮಾನವೀಯ ದೃಷ್ಟಿಯಿಂದ ಅದರ ಅಗತ್ಯವೂ ಇದೆ ಎಂದರು.

ಯಾವುದೇ ಪರಿಣಾಮ ಬೀರೋಲ್ಲ

ಭಾರತ್ ಜೋಡೋ ಅಭಿಯಾನ ದಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ,  ಸಹಜವಾಗಿ ಎಲ್ಲಾ ಪಕ್ಷದ ಮುಖ್ಯ ಸ್ಥರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ  ಅರ್ಧ ಕಿ.ಮೀ ನಡೆಯು ವಾಪಸ್ಸಾಗಿದ್ದಾರೆ. ಇದ್ಯಾವುದೂ ಪರಿಣಾಮವನ್ನು ಬೀರುವುದಿಲ್ಲ ಎಂದರು. ಪ್ರಿಯಾಂಕಾ ಗಾಂಧಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ನಮಗೂ ಸಂಬಂಧ ಇಲ್ಲ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ ಎಂದರು.

ಆರು ರ್ಯಾಲಿಗಳು

ಭಾರತ್ ಜೋಡೋ ಅಭಿಯಾನಕ್ಕೂ  ಮುನ್ನವೇ ತೀರ್ಮಾನಿಸಿದಂತೆ ಬಿಜೆಪಿ ಆರು ರ್ಯಾಲಿಗಳನ್ನು ಕೈಗೊಳ್ಳಲಿದೆ. ಮಧ್ಯೆ ಅಧಿವೇಶನ ಹಾಗೂ ದಸರಾ ಇದ್ದುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಂಟಿ ಪ್ರವಾಸವನ್ನು ಪ್ರಾರಂಭ ಮಾಡಲಿದ್ದೇವೆ ಎಂದರು.

ಪೊಲೀಸ್ ಹಲ್ಲೆ ಕುರಿತು ಪರಿಶೀಲನೆ

ಮಂಡ್ಯದಲ್ಲಿ ಪೊಲೀಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಯಾರ ತಪ್ಪಿದೆ ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.