ಮನೆ ಅಪರಾಧ ಗುಜರಾತ್ ಮತ್ತು ಮುಂಬೈಯಲ್ಲಿ ಎನ್’ಸಿಬಿ ದಾಳಿ: 120 ಕೋಟಿ ಮೌಲ್ಯದ ಡ್ರಗ್ಸ್ ವಶ

ಗುಜರಾತ್ ಮತ್ತು ಮುಂಬೈಯಲ್ಲಿ ಎನ್’ಸಿಬಿ ದಾಳಿ: 120 ಕೋಟಿ ಮೌಲ್ಯದ ಡ್ರಗ್ಸ್ ವಶ

0

ಮುಂಬೈ(Mumbai): ಗುಜರಾತ್ ಮತ್ತು ಮುಂಬೈಯಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು, ₹120 ಕೋಟಿ ಮೌಲ್ಯದ 60 ಕೆ.ಜಿ. ಮೆಫೆಡ್ರೋನ್‌ (ಎಂಡಿ) ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ನಿವೃತ್ತ ಪೈಲಟ್ ಸೇರಿದಂತೆ ಆರು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್ ಸಿಂಗ್, ಗುಜರಾತ್‌ನ ಜಾಮ್‌ನಗರದ ನೌಕಾ ಗುಪ್ತಚರ ಘಟಕಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಎನ್‌ಸಿಬಿಯ ಕೇಂದ್ರ ಕಚೇರಿ ದೆಹಲಿ ಮತ್ತು ಮುಂಬೈ ಘಟಕದ ಅಧಿಕಾರಿಗಳು ಅಕ್ಟೋಬರ್ 3ರಂದು ಜಾಮ್‌ನಗರದಲ್ಲಿ ನಡೆಸಿದ ದಾಳಿಯಲ್ಲಿ 10 ಕೆ.ಜಿ ಮೆಫೆಡ್ರೋನ್‌ ವಶಪಡಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮ್‌ನಗರದಿಂದ ಒಬ್ಬ ಮತ್ತು ಮುಂಬೈಯಿಂದ ಮೂವರನ್ನು ಬಂಧಿಸಿದೆ.

ದಕ್ಷಿಣ ಮುಂಬೈನ ಬಂದರು ಪ್ರದೇಶ ಎಸ್‌ಬಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ಗುರುವಾರ ನಡೆಸಿದ ಮಗದೊಂದು ಕಾರ್ಯಾಚರಣೆಯಲ್ಲಿ 50 ಕೆ.ಜಿ ಮೆಫೆಡ್ರೋನ್‌ ವಶಪಡಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಮಾಫಿಯಾ ಸೂತ್ರಧಾರಿ ಸೇರಿದಂತೆ ಇಬ್ಬರನ್ನು ಬಂಧಿಸಿದೆ. ಇದರಲ್ಲಿ ಏರ್ ಇಂಡಿಯಾ ನಿವೃತ್ತ ಪೈಲಟ್ ಸೊಹೈಲ್ ಗಫರ್ ಮಹಿದಾ ಎಂಬಾತ ಸೇರಿದ್ದಾನೆ.