ಮನೆ ಸುದ್ದಿ ಜಾಲ ಪ್ರಹ್ಲಾದ್ ರಾವ್ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ: ಸಿ ನಾರಾಯಣಗೌಡ ಒತ್ತಾಯ

ಪ್ರಹ್ಲಾದ್ ರಾವ್ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ: ಸಿ ನಾರಾಯಣಗೌಡ ಒತ್ತಾಯ

0

ಮೈಸೂರು(Mysuru): ಮೈಸೂರು ಜಿಲ್ಲಾಡಳಿತ ಪುರೋಹಿತ ಪ್ರಹ್ಲಾದ್ ರವರ ಸೇವೆಯನ್ನು ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು  ಮುಂದಾಗಲಿ ಎಂದು ಹೋಟೆಲ್  ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಒತ್ತಾಯಿಸಿದರು.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿದ್ವಾನ್ ಪ್ರಹ್ಲಾದ್ ರಾವ್ ರವರಿಗೆ ಮೈಸೂರು ರಕ್ಷಣಾ ವೇದಿಕೆ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಇನ್ನಿತರ ಸಂಘಟನೆ ವತಿಯಿಂದ  ಸನ್ಮಾನಿಸಿ ಅಭಿನಂದಿಸಲಾಯಿತು.

25 ವರ್ಷಗಳಿಂದ ನಾಡಹಬ್ಬ ದಸರಾ ಸಂಧರ್ಭದಲ್ಲಿ ಗಜಪಡೆಯನ್ನು ವೇದಬ್ರಹ್ಮ ಅರಮನೆ ಪುರೋಹಿತ ಪ್ರಹಲ್ಲಾದ್ ರವರು ಮೈಸೂರಿಗೆ ಬರಮಾಡಿಕೊಂಡು ನಾಡಿನ ಜನತೆಗೆ ಸುಖ ಶಾಂತಿ ಸಮೃದ್ಧಿ ಸಿಗಲೆಂದು ನಾಡದೇವತೆಯಲ್ಲಿ ಪ್ರಾರ್ಥನೆ ಸಂಕಲ್ಪಸಿ ಪ್ರತಿದಿನ ನವರಾತ್ರಿಯಲ್ಲಿ ಆನೆಗೆ ಪೂಜೆ ನೈವೇದ್ಯ ಪ್ರಸಾದ ಕೊಟ್ಟು, ಜಂಬೂಸವಾರಿ ಹೊರಡುವ ಸಂಧರ್ಭದಲ್ಲಿ ಅಂಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ   ಧಾರ್ಮಿಕ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ಅರಮನೆ ಪುರೋಹಿತರಾದ ಪ್ರಹಲ್ಲಾದ್ ರವರು ಮಾತನಾಡಿ, ಕಾಡಿನ ಪ್ರದೇಶವಾದ ಎನ್. ಬೇಗೂರು ಗ್ರಾಮದಲ್ಲಿ ನಮ್ಮ  ತಂದೆಯವರಾದ ವಾಸುದೇವರಾವ್ ರವರು ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಕುಟುಂಬದವರೆಲ್ಲರೂ ಆನೆಯ ಒಡನಾಟದಲ್ಲಿಯೇ ಬೆಳೆದೆವು. ಪ್ರತಿದಿನ ಆನೆಗಳ ಭಾಷೆಗಳನ್ನು ಅರಿತು  ಭಾಂದವ್ಯ ಬೆಳೆಯಿತು, ಆನೆಗಳು ನಮ್ಮನ್ನು ಕಂಡರೆ ಸಾಕು ಪ್ರೀತಿ ಮಮತೆ ತೋರಿಸುತ್ತವೆ ಪೂಜಾಕೈಂಕರ್ಯ ಸಲ್ಲಿಸುವಾಗ ಮಂತ್ರಗಳನ್ನು ಹೇಳುವ ಸಂಧರ್ಭದಲ್ಲಿ ಆನೆಯ ಭಾಷೆಗಳ ಮೂಲಕ ಮಾತನಾಡಿಸಿದಾಗ ಗಜಪಡೆ ಬಹಳ ಶಾಂತಿಯಿಂದ ಭಕ್ತಿಪೂರ್ವಕವಾಗಿ ಭಾಗವಹಿಸುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ,ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ , ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್ ,ಅಜಯ್ ಶಾಸ್ತ್ರಿ ,ಎಸ್ ಎನ್ ರಾಜೇಶ್ ,ರಾಕೇಶ್ ಕುಂಚಿಟಿಗ ,ಸತೀಶ್ ,ಶರತ್ ,ಲಿಂಗರಾಜು ,ಹಾಗೂ ಇನ್ನಿತರರು ಹಾಜರಿದ್ದರು.