ಮನೆ ಮನರಂಜನೆ ಫೋನ್ ಭೂತ್ ಸಿನಿಮಾ ಟ್ರೈಲರ್ ಬಿಡುಗಡೆ

ಫೋನ್ ಭೂತ್ ಸಿನಿಮಾ ಟ್ರೈಲರ್ ಬಿಡುಗಡೆ

0

ಹೈದರಾಬಾದ್ : ಕತ್ರಿನಾ ಕೈಫ್,​ ಇಶಾನ್​ ಖಟ್ಟರ್​ ಮತ್ತು ಸಿದ್ಧಾಂತ್​ ಚತುರ್ವೇದಿ ಅಭಿನಯಿಸಿರುವ ಫೋನ್​ ಭೂತ್​ ಸಿನಿಮಾ ಟ್ರೈಲರ್​ ರಿಲೀಸ್​ ಆಗಿದೆ.

ಟ್ರೈಲರ್​ ಭಯಾನಕ ಹಾಗೂ ಹಾಸ್ಯಭರಿತವೂ ಆಗಿದೆ.

ಮಿರ್ಜಾಪುರ್​ ಜನಪ್ರಿಯ ವೆಬ್​ಸರಣಿಗೆ ನಿರ್ದೇಶನ ಮಾಡಿದ್ದ ಗುರ್ಮೀತ್​ ಸಿಂಗ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಭೂತ್​ ಫೋನ್​ ಹಾರರ್ ಕಾಮಿಡಿ ಸಿನಿಮಾದಲ್ಲಿ ಇಶಾನ್​, ಸಿದ್ಧಾಂತ್​ ಹಾಗೂ ಕತ್ರಿನಾ ಅವರು ಕಮಾಲ್​ ಮಾಡಿದ್ದಾರೆ. 37 ಹರೆಯದ ಕತ್ರಿನಾ ಇದೇ ಮೊದಲ ಬಾರಿಗೆ 25ರ ಹರೆಯ ಇಶಾನ್​ ಹಾಗೂ 27 ಹರೆಯದ ಸಿದ್ಧಾಂತ್​ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಫೋನ್​ ಭೂತ್​ ಟ್ರೈಲರ್​ ನೋಡಿದರೆ ಈ ಚಿತ್ರ ಘೋಸ್ಟ್​ಬಸ್ಟರ್​ ಭಾರತೀಯ ಆವೃತ್ತಿಗೆ ಟ್ಯಾಗ್​ ಮಾಡುವಂತಿದೆ.

ರವಿಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಬಾತ್ ಚಿತ್ರಕಥೆ ಬರೆದಿರುವ ಈ ಸಿನಿಮಾ, ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಅವರ ಮೊದಲ ಚಿತ್ರವಾಗಿದೆ. ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಒಡೆತನದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಹೊಣೆ ಹೊತ್ತಿದೆ.

ಫೋನ್ ಭೂತ್ ಸಿನಿಮಾ ನವೆಂಬರ್ 4ರಂದು ಬಿಡುಗಡೆಯಾಗಲಿದೆ.