ಮನೆ ಯೋಗಾಸನ ಶೀತ, ಕೆಮ್ಮು ಕಫದ ಸಮಸ್ಯೆ ಇರುವವರಿಗೆ ಈ ಯೋಗಾಸನಗಳು ಸಹಕಾರಿ

ಶೀತ, ಕೆಮ್ಮು ಕಫದ ಸಮಸ್ಯೆ ಇರುವವರಿಗೆ ಈ ಯೋಗಾಸನಗಳು ಸಹಕಾರಿ

0

ಶೀತ ಮತ್ತು ಕೆಮ್ಮು ಎನ್ನುವುದು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಆಗಾಗ ವಾತಾವರಣದಲ್ಲಿ ಬದಲಾವಣೆಗಳು ಕಂಡು ಬರುವುದರಿಂದ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಾ ಹೋಗಿ ಇಂತಹ ಸಣ್ಣ-ಪುಟ್ಟ ಸಮಸ್ಯೆಗಳು ನಮ್ಮನ್ನು ಬೇಗನೇ ಆವರಿಸಿ ಬಿಡುತ್ತದೆ!

ಇನ್ನು ನಮಗೆ ಗೊತ್ತೇ ಇರುವ ಹಾಗೆ ಶೀತ ಹಾಗೂ ಕೆಮ್ಮಿನ ಸಮಸ್ಯೆ, ಅಷ್ಟೊಂದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಅಲ್ಲದಿದ್ದರೂ ಕೂಡ, ಕೆಲವೊಮ್ಮೆ ಇದರಿಂದ ಸಾಕಷ್ಟು ಕಿರಿಕಿರಿಯನ್ನು ಅನು ಭವಿಸಬೇಕಾಗುತ್ತದೆ! ಕೆಲವೊಮ್ಮೆ ಇದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಕೆಮ್ಮಿನ ಸಮಸ್ಯೆ ಅಲ್ಲಿಗೆಯೇ ಕಫಕ್ಕೆ ತಿರುಗ, ಕೊನೆಗೆ ಉಸಿರಾಟದ ಸಮಸ್ಯೆಗೆ ಕಾರಣವಾಗಿ ಬಿಡುತ್ತದೆ. ಅದರಲ್ಲೂ ಮಳೆ ಗಾಲದಲ್ಲಿ ಅಂತೂ, ಈ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತದೆ.

ಆದರೆ ಇದಕ್ಕೆಲ್ಲಾ ಮೆಡಿಕಲ್ ಶಾಪ್ಗಳಲ್ಲಿ ಅಥವಾ ವೈದ್ಯರಲ್ಲಿ ಸಿಗುವ ಮಾತ್ರೆ-ಸಿರಫ್ಗಳನ್ನು ತಗೆದು ಕೊಳ್ಳುವ ಬದಲು, ಕೆಲವೊಂದು ಯೋಗಾಭ್ಯಾಸಗಳನ್ನು ಪ್ರತಿದಿನ ಅನುಸರಿಸುವುದರಿಂದ ಪರಿಹಾರ ಕಾಣಬಹುದಾಗಿದೆ. ಮುಖ್ಯವಾಗಿ ನಾವು ಈ ಲೇಖನದಲ್ಲಿ ನೀಡಿರುವ ಯೋಗಾ ಭ್ಯಾಸಗಳನ್ನು ಪ್ರತಿನಿತ್ಯ ಮಾಡುವುದರಿಂದ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಶೀತ-ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

ಸೇತುಬಂಧಾಸನ

• ಮೊದಲಿಗೆ ನೆಲದ ಮೇಲೆ ಯೋಗ ಮ್ಯಾಟ್ ಹಾಸಿ, ಎರಡೂ ಕೈಗಳನ್ನು ಚಾಚಿ ಬೆನ್ನಿನ ಮೇಲೆ ಮಲಗಿ ಕೊಳ್ಳಿ. ಆಮೇಲೆ ಎರಡೂ ಕಾಲನ್ನು ಮಡಚಿ, ಪಾದಗಳನ್ನು ನೆಲದ ಮೇಲೆ ಇರಿಸಿಕೊಳ್ಳಿ.

• ಈಗ ನಿಧಾನವಾಗಿ, ಉಸಿರನ್ನು ಹೊರಗೆ ಬಿಡುತ್ತಾ, ಕೈ ತೋಳಿನ ಸಹಾಯದಿಂದ ಸೊಂಟದ ಭಾಗ ವನ್ನು ಮೇಲೆಕ್ಕೆ ಎತ್ತಿ.ಈ ಸಮಯದಲ್ಲಿ ಮೂರು ನಾಲ್ಕು ಬಾರಿಯಾದರೂ ದೀರ್ಘವಾಗಿ ಉಸಿರಾ ಡಲು ಪ್ರಯ ತ್ನಿಸಿ. ನೆನಪಿಡಿ ಮೊದಲ ಬಾರಿ ಈ ಯೋಗಾಭ್ಯಾಸ ಪ್ರಯತ್ನಿವವರಾದರೆ, ಬೆನ್ನಿನ ಭಾಗದಲ್ಲಿ ನೋವು ಕಂಡುಬರಬಹುದು, ಆದರೆ ಪ್ರತಿದಿನ ಈ ಯೋಗಾಭ್ಯಾಸ ಮಾಡುತ್ತಾ ಹೋದರೆ, ಸಮಸ್ಯೆ ಪರಿಹಾರವಾಗುವುದು.

• ಪ್ರತಿದಿನ ಸುಮಾರು ನಾಲ್ಕರಿಂದ ಐದು ಬಾರಿ, ಈ ಯೋಗಾಭ್ಯಾಸವನ್ನು ಮಾಡುವುದರಿಂದ ಎದೆಯ ಭಾಗಲ್ಲಿ ಕಟ್ಟಿಕೊಂಡಿರುವ ಕಫ ನೀರಾಗಿ, ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಕೆಮ್ಮು ಮತ್ತು ಶೀತದ ಸಮಸ್ಯೆಗಳು ಕೂಡ ದೂರವಾಗುತ್ತದೆ!

ಒಂಟೆ ಭಂಗಿಯ ರೀತಿಯಲ್ಲಿ

• ಮೊದಲಿಗೆ ನೆಲದ ಮೇಲೆ ಯೋಗ ಮ್ಯಾಟ್ ಹಾಸಿ, ಎರಡೂ ಕಾಲುಗಳನ್ನು ಮಡಚಿ, ನೇರವಾಗಿ ಕುಳಿತುಕೊಳ್ಳಿ

• ಈಗ ನಿಮ್ಮ ಬಲ ಹಾಗೂ ಎಡ ಕೈಗಳನ್ನು ಎರಡೂ ಸೊಂಟದ ಸೊಂಟದ ಮೂಳೆಯ ಅಂಚಿನ ಮೇಲೆ ಇರಿಸಿಕೊಳ್ಳಿ

• ಇನ್ನು ಸೊಂಟದ ಭಾಗವನ್ನು ಹಿಂದಕ್ಕ ಬಾಗಿಸಿ, ತಲೆಯನ್ನು ಆಕಾಶ ನೋಡುವ ಹಾಗೆ ಮೇಲೆತ್ತಿ

• ಈ ಸಮಯದಲ್ಲಿ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಂಡು, ಒಂದೆರಡು ನಿಮಿಷದಲ್ಲಿ ಹಾಗೆಯೇ ಹೊರಗೆ ಬಿಡಿ. ಆಮೇಲೆ ಹಿಂದಕ್ಕೆ ಬಾಗಿದಂತೆ ಮಾಡಿ, ತಲೆಯನ್ನು ಅಕ್ಕ-ಪಕ್ಕಕ್ಕೆ ತಿರುಗಿಸಿ.

• ಈ ಯೋಗಾಭ್ಯಾಸ ಸ್ವಲ್ಪ ಕಷ್ಟ ಅನಿಸಿದರೂ, ಆರೋಗ್ಯವೃದ್ಧಿಗೆ ಬಹಳ ಒಳ್ಳೆಯದು. ಹೀಗಾಗಿ ಪ್ರತಿ ದಿನ ಒಂದೆರಡು ಬಾರಿಯಾದರೂ, ಈ ಯೋಗಾಭ್ಯಾಸ ಪ್ರಯತ್ನಿಸಿ. ಇದರಿಂದ ಉಸಿರಾಟದ ಪ್ರಕ್ರಿಯೆ ಸರಿಯಾಗಿ ನಡೆಯುವುದರಿಂದ, ಕೆಮ್ಮು ಹಾಗೂ ಶೀತದ ಸಮಸ್ಯೆಗಳು ಕೂಡ ನಿವಾರಣೆಯಾವುದು

ಪರ್ವತಾಸನ

• ಈ ಪರ್ವತಾಸನಕ್ಕೆ ಗುಡ್ಡದ ಭಂಗಿ ಎಂದೂ ಕೂಡ ಕರೆಯುತ್ತಾರೆ. ಮೊದಲಿಗೆ ಆರಾಮವಾಗಿ ಸುಖಾಸ ನದಲ್ಲಿ ಕುಳಿತು ಕೊಂಡು, ಎರಡು ಕೈಗಳನ್ನು ನೇರವಾಗಿ ಮೇಲಕ್ಕೆ ಎತ್ತಿ. ಈ ಸಮಯದಲ್ಲಿ ಎರಡು ಅಂಗೈಗಳು ಒಂದನ್ನೊಂದು ನೋಡುವಂತೆ ಇರಲಿ!

• ಈಗ ಎರಡೂ ಒಟ್ಟಿಗೆ ಸೇರಿಸಿಕೊಂಡು, ಕಣ್ಣುಗಳನ್ನು ಮುಚ್ಚಿ, ದೀರ್ಘವಾಗಿ ಉಸಿರನ್ನು ಒಳಗೆ ತೆಗೆದಕೊಂಡು, ಹಾಗೂ ಉಸಿರು ಹೊರಗೆ ಬಿಡುತ್ತಾ ಕೈಗಳನ್ನು ಅಗಲಿಸಿಕೊಳ್ಳಿ.

• ಪ್ರತಿದಿನ ಎರಡು ಮೂರು ಬಾರಿ ಈ ಯೋಗಾಭ್ಯಾಸವನ್ನು ಮಾಡುವುದರಿಂದ, ಉಸಿರಾಟದ ಪ್ರಕ್ರಿಯೆ ಸರಿಯಾಗಿ ನಡೆದು, ಎದೆಯಲ್ಲಿ ಕಟ್ಟಿರುವ ಕಫದ ಕರಗಿ, ಶೀತ ಹಾಗೂ ಕೆಮ್ಮಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ