ಮನೆ ಅಡುಗೆ ಚಂದ್ರಹಾರ ಸಿಹಿ ಮಾಡುವ ವಿಧಾನ

ಚಂದ್ರಹಾರ ಸಿಹಿ ಮಾಡುವ ವಿಧಾನ

0

ಚಂದ್ರಹಾರ ಎನ್ನುವುದು ಕರ್ನಾಟಕ ಶೈಲಿಯ ಒಂದು ಸಿಹಿ ಪಾಕವಿಧಾನ. ಸಾಂಪ್ರದಾಯಿಕ ಸಿಹಿಯಾದ ಇದನ್ನು ಮದುವೆ, ಮುಂಜಿ, ನಾಮಕರಣಗಳಂತಹ ಶುಭ ಕಾರ್ಯದ ಸಮಯದಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಈ ರುಚಿಕರವಾದ ಸಿಹಿಯನ್ನು ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸುವ ವಿಧಾನ ಇಲ್ಲಿದೆ.

(ಬಡಿಸುವ ಪ್ರಮಾಣ: 2)

ಪ್ರಮುಖ ಸಾಮಗ್ರಿ

• 1/2 ಕಪ್ ಮಂದವಾದ ಹಾಲು

ಮುಖ್ಯ ಅಡುಗೆಗೆ

• 1/2 ಕಪ್ ಸಕ್ಕರೆ

• 1 ಕಪ್ ನೀರು

• 1/2 ಲೀಟರ್ ಹಾಲು

• 1 ಮುಷ್ಟಿಯಷ್ಟು ಮಿಶ್ರ ಡ್ರೈ ಫ್ರೂಟ್ಸ್

• 1/2 ಕಪ್ ರವೆ ಉಪ್ಪಿಟ್ಟು

• 1/4 ಕಪ್ ತುಪ್ಪ

• 3/4 ಕಪ್ ಮೈದಾ

• ಅಗತ್ಯ ತಕ್ಕಷ್ಟು ಲವಂಗ

• 1 Pinch ಕೇಸರಿ

• ಅಗತ್ಯ ತಕ್ಕಷ್ಟು ಏಲಕ್ಕಿ ಎಸೆನ್ಸ್

ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ, ಮೈದಾ, ರವೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಬಳಿಕ ಸ್ವಲ್ಪ ನೀರನ್ನು ಸೇರಿಸಿ, ಗಟ್ಟಿಯಾದ ಹಿಟ್ಟಿನ ಮಿಶ್ರಣದಂತೆ ನಾದಿಕೊಳ್ಳಬೇಕು.

ಹಿಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.  ನಂತರ 10 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.

ಒಂದು ಬಾಣಲೆಯಲ್ಲಿ ಹಾಲನ್ನು ಸೇರಿಸಿ, ಕುದಿಯಲು ಬಿಡಿ. ಹಾಲು ಚೆನ್ನಾಗಿ ಕುದಿ ಬಂದು ಸ್ವಲ್ಪ ದಪ್ಪವಾದ ಸ್ಥಿರತೆ ಬರುವ ತನಕ ಕುದಿಸಿ.- ಬಳಿಕ ಮಂದಗೊಳಿಸಿದ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ, ಮಿಶ್ರಗೊಳಿಸಿ.

ಹಾಲು ದಪ್ಪವಾದ ಸ್ಥಿರತೆ ಪಡೆದುಕೊಂಡ ಬಳಿಕ ಕೇಸರಿ ಎಳೆ, ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಬಳಿಕ 2-3 ನಿಮಿಷಗಳ ಕಾಲ ಕುದಿಸಿ.

ಈಗ ಕಲಸಿಕೊಂಡ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ.- ಆ ಉಂಡೆಯನ್ನು ಸಣ್ಣ ಸಣ್ಣ ಪುರಿಯಂತೆ ಲಟ್ಟಿಸಿ  ಬಳಿಕ ಅದನ್ನು ತ್ರಿಭುಜದ ಆಕ್ರತಿಯಲ್ಲಿ ಮಡಚಿ. ಬಳಿಕ ಒಂದು ಲವಂಗದಿಂದ ತುದಿಯನ್ನು ಚುಚ್ಚಿ.  ಹೀಗೆ ಮಾಡಿದರೆ ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುವುದಿಲ್ಲ.

ಒಂದು ಬಾಣಲೆಯಲ್ಲಿ ಎಣ್ಣೆ ಸೇರಿಸಿ, ಬಿಸಿ ಮಾಡಿ.  ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಚಂದ್ರಹಾರನ್ನು ಸೇರಿಸಿ. ಎರಡು ಬದಿಯಲ್ಲಿ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗಿದ ಬಳಿಕ ಎಣ್ಣೆಯಿಂದ ತೆಗೆಯಿರಿ.

ಎಣ್ಣೆಯಲ್ಲಿ ಕರಿದ ಚಂದ್ರಹಾರವನ್ನು ಒಂದು ಪ್ಲೇಟ್ಗೆ ವರ್ಗಾಯಿಸಿ. ಸಿದ್ಧಪಡಿಸಿಕೊಂಡ ಸಿಹಿ ಹಾಲನ್ನು ಅದರ ಮೇಲೆ ಸ್ವಲ್ಪ ಸುರಿಯಿರಿ.  ಬಿಸಿ ಬಿಸಿಯಾದ ಸಿಹಿ ತಿಂಡಿಯನ್ನು ಸವಿಯಲು ನೀಡಿ.   ನಿಮ್ಮ ಆಯ್ಕೆಗೆ ಅನುಗುಣವಾಗಿ ತಣ್ಣನೆಯ ಹಾಲನ್ನು ಸಹ ಸೇರಿಸಿಕೊಂಡು ಸವಿಯಬಹುದು.