ಮನೆ ಅಪರಾಧ ಹಾಡಿ ವ್ಯಕ್ತಿಯ ಅನುಮಾನಾಸ್ಪದ ಪ್ರಕರಣ: 17 ಜನರ ವಿರುದ್ಧ ಎಫ್’ಐಆರ್ ದಾಖಲು

ಹಾಡಿ ವ್ಯಕ್ತಿಯ ಅನುಮಾನಾಸ್ಪದ ಪ್ರಕರಣ: 17 ಜನರ ವಿರುದ್ಧ ಎಫ್’ಐಆರ್ ದಾಖಲು

0

ಹೆಚ್. ಡಿ. ಕೋಟೆ(H.D.Kote) : ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಆರೋಪದ ಮೇಲೆ ಹೊಸಹಳ್ಳಿ ಹಾಡಿಯ 3 ಜನರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದರು. ಅವರ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಅದು ಕೊಲೆ ಎಂದು ಹಾಡಿಯ ಜನರು ಆರೋಪಿಸಿದ್ದಾರೆ

ಈ ಸಂಬಂಧ ಆರ್’ಎಫ್’ಓ ಮತ್ತು ಡಿಆರ್’ಎಫ್’ಓ ಸೇರಿದಂತೆ 17 ಮಂದಿಯ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

ಗುಂಡ್ರೆ ಅರಣ್ಯ ವಲಯದ ಆರ್’ಎಫ್’ಓ ಅಮೃತೇಶ್, ಡಿಆರ್’ಎಫ್’ಓ ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ಬಾಹುಬಲಿ, ಆನಂದ್, ರಾಮು, ಶೇಖರಯ್ಯ, ಸದಾಶಿವ , ಮಂಜು,ಉಮೇಶ್, ಸಂಜಯ್, ರಾಜನಾಯಕ್, ಸುಷ್ಮಾ,ಅಯ್ಯಪ್ಪ, ಮಹಾದೇವಿ, ಸೋಮಶೆಖರ್, ತಂಗಮಣಿ, ಸಿದ್ದಿಕ್ ಪಾಷಾ  ಇವರ ಮೇಲೆ ಎಫ್ಐಆರ್ ದಾಖಲಾಗಿದೆ.

ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ವಶದಲ್ಲಿದ್ದ ಕರಿಯಪ್ಪ ಅವರ ಆರೋಗ್ಯ ಸ್ಥಿತಿ ಮಂಗಳವಾರ ರಾತ್ರಿ ವ್ಯಾತ್ಯಾಸವಾಗಿತ್ತು. ಈ ಹಿನ್ನೆಲೆಯಲ್ಲಿ  ಅವರನ್ನು ಅರಣ್ಯಾಧಿಕಾರಿಗಳೇ ಮೈಸೂರಿನ ಕೆ ಆರ್ ಆಸ್ಪತ್ರಗೆ ದಾಖಲು ಮಾಡಿದ್ದರು. ಆದರೆ ಕರಿಯಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತೆಯಲ್ಲೇ ನಿಧನರಾದರು.

ಕರಿಯಪ್ಪ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಕರಿಯಪ್ಪ ಅವರ ತಲೆಗೆ ಏಟು ಬಿದ್ದಿದ್ದು ಇದರಿಂದಾಗಿಯೇ ಅವರು ಸಾಪನ್ನಪ್ಪಿದ್ದಾರೆ ಇದಕ್ಕೆ ಅರಣ್ಯಾಧಿಕಾರಿಗಳೇ ಕಾರಣವೆಂದು ಆರೋಪ ಮಾಡಿರುವ ಆತನ ಕುಟುಂಬದವರು ಶವವನ್ನು ವಲಯ ಅರಣ್ಯಾಧಿಕಾರಿ ಕಚೇರಿಯ ಮುಂದಿಟ್ಟು ಪ್ರತಿಭಟನೆ ನಡೆಸಿ ಕರಿಯಪ್ಪನವರಿಗೆ ಚಿತ್ರಹಿಂಸೆ ನೀಡಿದವರ ಮೇಲೆ ಎಫ್ಐಆರ್ ದಾಖಲಾದ ನಂತರವೇ ಪ್ರತಿಭಟನಯನ್ನು ಹಿಂಪಡೆದವರು.

ಆ ಬಳಿಕ ಮೃತ ಕರಿಯಪ್ಪ ಅವರ ಮಗನ ಹೇಳಿಕೆ ಮತ್ತು ದೂರಿನ ಆಧಾರದ ಮೇಲೆ ಅಂತರಸಂತೆ ಪೊಲೀಸರು 17 ಮಂದಿ ಅರಣ್ಯ ಸಿಬಂದಿಗಳ ವಿರುದ್ದ ಭಾರತೀಯ ದಂಡ ಸಂಹಿತೆ 302 (ಕೊಲೆ) ಮತ್ತು 242 (ಅಕ್ರಮ ಬಂಧನ) ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

ತಹಶೀಲ್ದಾರ್ ಹೇಳಿದ್ದೇನು  ?

ಕರಿಯಪ್ಪ ಅವರ ಸಾವಿನ ಸಂಬಂಧ ಹೆಚ್ ಡಿ ಕೋಟೆಯ ತಹಶೀಲ್ದಾರ್ ರತ್ನಾಂಬಿಕಾ ಅವರು  ನೆನ್ನೆ ದಿನ ಮೈಸೂರಿನ ಶವಾಗಾರಕ್ಕೆ ಆಗಮಿಸಿ ಘಟನೆಯ ವಿವರವನ್ನು ಪಡೆದು. ಕರಿಯಪ್ಪ ಅವರ ಸಾವು ಅರಣ್ಯಾಧಿಕಾರಿಗಳ ಹಲ್ಲೆಯಿಂದಲೇ ಸಂಭವಿಸಿರುವುದು ದೃಢಪಟ್ಟರೆ ಕಾನೂನಿನಂತೆ ಕ್ರಮಕೈಗೊಳ್ಳಗಾಗುವುದು ಎಂದು ಹೇಳಿದ್ದಾರೆ.