ಮನೆ ರಾಜ್ಯ ಮಳೆಹಾನಿ: 6279 ಹೆಕ್ಟೇರ್ ಬೆಳೆ ಹಾನಿ, 13 ಜನ ಸಾವು

ಮಳೆಹಾನಿ: 6279 ಹೆಕ್ಟೇರ್ ಬೆಳೆ ಹಾನಿ, 13 ಜನ ಸಾವು

0

ಹೊಸಪೇಟೆ(Hospete):  ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ 6,279 ಹೆಕ್ಟೇರ್ ಬೆಳೆ ಹಾನಿಯಾಗಿದ್ದು,  13 ಜನ ಸಾವಿಗೀಡಾಗಿದ್ದಾರೆ.

ತಾಲ್ಲೂಕಿನ ಕಮಲಾಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ನಡೆಸಿದ ಮಳೆ ಹಾನಿ ಕುರಿತ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ಟೋಬರ್ ತಿಂಗಳೊಂದರಲ್ಲೇ ಮಳೆಗೆ  3309 ಮನೆಗಳಿಗೆ ಹಾನಿ‌ ಉಂಟಾಗಿದ್ದು, 28 ಜಾನುವಾರುಗಳು ಮೃತಪಟ್ಟಿವೆ. ಐದು ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1330 ಜನ ಆಶ್ರಯ ಪಡೆದಿದ್ದಾರೆ. 8.83 ಲಕ್ಷ 947.8 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮ

ಎರಡನೇ ತದಲ್ಲಿ 2 ಲಕ್ಷ ರೈತರಿಗೆ ₹250 ಕೋಟಿ ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ 48485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ.

ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 635.13 ಕೋಟಿ ಲಭ್ಯವಿದೆ.13 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಎಸ್’ಪಿಗಳು ಪಾಲ್ಗೊಂಡಿದ್ದರು.