ಚಿತ್ರದುರ್ಗ(Chitradurga): ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಪ್ರಕರಣದ 3ನೇ ಆರೋಪಿ ಮರಿಸ್ವಾಮಿ ಬಂಧನವಾಗಿದೆ.
ಮುರುಘಾ ಶ್ರೀಗಳ ಮೇಲೆ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವಿದ್ದು, ಎರಡನೇ ಎಫ್ಐಆರ್ನಲ್ಲೂ ಮರಿಸ್ವಾಮಿ ಹೆಸರು ಉಲ್ಲೇಖವಾಗಿತ್ತು.
ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅಜ್ಞಾತ ಸ್ಥಳದಲ್ಲಿ ಮರಿಸ್ವಾಮಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಎಫ್’ಐಆರ್ ನಜರಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ದಾಖಲಾದ ಮತ್ತೊಂದು ಪೋಕ್ಸೋ ಪ್ರಕರಣ ಇದಾಗಿದೆ.














