ಮನೆ ರಾಷ್ಟ್ರೀಯ ನ್ಯಾಯ ಪಡೆಯುವಲ್ಲಿ ವಿಳಂಬವಾಗುತ್ತಿರುವುದು ಜನರ ಮುಂದಿರುವ ಪ್ರಮುಖ ಸವಾಲು: ಪ್ರಧಾನಿ ಮೋದಿ

ನ್ಯಾಯ ಪಡೆಯುವಲ್ಲಿ ವಿಳಂಬವಾಗುತ್ತಿರುವುದು ಜನರ ಮುಂದಿರುವ ಪ್ರಮುಖ ಸವಾಲು: ಪ್ರಧಾನಿ ಮೋದಿ

0

ಗುಜರಾತ್‌(Gujarath): ನ್ಯಾಯ ಪಡೆಯುವಿಕೆಯಲ್ಲಿ ವಿಳಂಬವಾಗುತ್ತಿರುವುದು ನಮ್ಮ ದೇಶದ ಜನರು ಎದುರಿಸುತ್ತಿರುವ ಮುಖ್ಯವಾದ ಸವಾಲುಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಏಕತಾ ನಗರದಲ್ಲಿ  ಶನಿವಾರ ನಡೆದ ಎರಡು ದಿನಗಳ ‘ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಾಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೊ ಸಂದೇಶದ ಮೂಲಕ ಅವರು ಮಾತನಾಡಿದರು.

ಈ ವೇಳೆ, ಕಾನೂನನ್ನು ಸ್ಪಷ್ಟವಾಗಿ ಸರಳ ಹಾಗೂ ಪ್ರಾದೇಶಿಕ ಭಾಷೆಯಲ್ಲಿಯೇ ಬರೆಯಬೇಕು. ಇದರಿಂದಾಗಿ ಬಡವರಲ್ಲಿ ಬಡವರೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾವಿರಾರು ವರ್ಷಗಳಿಂದ ಮುನ್ನಡೆಯುತ್ತ ಸಾಗಿರುವುದರ ಜೊತೆಜೊತೆಗೆ ಆಂತರಿಕ ಸುಧಾರಣೆಗಳನ್ನೂ ಕಂಡುಕೊಳ್ಳುತ್ತಾ ಬಂದಿರುವುದು ಭಾರತೀಯ ಸಮಾಜದ ವಿಶೇಷತೆಯಾಗಿದೆ ಎಂದಿರುವ ಮೋದಿ, ನಮ್ಮ ಸಮಾಜವು ಪ್ರಸ್ತುತವಲ್ಲದ, ಕೆಟ್ಟ ಪದ್ದತಿಗಳು ಮತ್ತು ಸಂಪ್ರದಾಯಗಳನ್ನು ಸ್ವಯಂ ಪ್ರೇರಿತವಾಗಿ ತೊಡೆದುಹಾಕುತ್ತಾ ಬಂದಿದೆ. ಒಂದೇರೀತಿಯ ಪದ್ದತಿಗಳಿಗೆ ಅಂಟಿಕೊಂಡು ಕೂರುವುದರಿಂದ ಪ್ರಗತಿಗೆ ತೊಡಕಾಗುತ್ತದೆ ಎಂಬುದು ನಮಗೆ ತಿಳಿದಿದೆ ಎಂದೂ ಹೇಳಿದ್ದಾರೆ.