ಮನೆ Uncategorized ಉಕ್ರೇನ್ ರಾಜಧಾನಿ ಮೇಲೆ ರಷ್ಯಾದ ಕಾಮಿ ಕಾಜಿ ಡ್ರೋನ್ ದಾಳಿ: ಹಲವು ಕಟ್ಟಡಗಳಿಗೆ ಹಾನಿ

ಉಕ್ರೇನ್ ರಾಜಧಾನಿ ಮೇಲೆ ರಷ್ಯಾದ ಕಾಮಿ ಕಾಜಿ ಡ್ರೋನ್ ದಾಳಿ: ಹಲವು ಕಟ್ಟಡಗಳಿಗೆ ಹಾನಿ

0

ಉಕ್ರೇನ್(Ukrain): ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ಇಂದು ಮುಂಜಾನೆ ರಷ್ಯಾಸೇನೆಯು ಇರಾನ್ ನಿರ್ಮಿತ ಕಾಮಿಕಾಜಿ ಡ್ರೋನ್‌ಗಳ ದಾಳಿ ನಡೆಸಿದ್ದು, ಅನೇಕ ಸ್ಫೋಟಗಳಿಂದ ನಗರ ತತ್ತರಿಸಿ ಹೋಗಿದೆ ಎಂದು ಉಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಉಕ್ರೇನ್ ಅಧ್ಯಕ್ಷರ ಸಹಾಯಕ ಸಿಬ್ಬಂದಿ, ಈ ರೀತಿ ದಾಳಿ ನಡೆಸುವ ಮೂಲಕ ನಾವು ಮೇಲುಗೈ ಸಾಧಿಸುತ್ತೇವೆ ಎಂದು ರಷ್ಯಾ ಭಾವಿಸಿದೆ. ಆದರೆ, ಈ ರೀತಿಯ ದಾಳಿಗಳು ಅವರ ಹತಾಶೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಉಕ್ರೇನ್ ದೇಶಕ್ಕೆ ಆದಷ್ಟು ಬೇಗ ವಾಯು ರಕ್ಷಣಾ ಬಲ ಬೇಕಿದೆ ಎಂದು ಉಕ್ರೇನ್ ಸರ್ಕಾರ ಮನವಿ ಮಾಡಿಕೊಂಡಿದೆ. ಈ ವಿಚಾರದಲ್ಲಿ ನಾವು ತಡ ಮಾಡುವಂತೆಯೇ ಇಲ್ಲ. ವಾಯು ಮಾರ್ಗದಲ್ಲಿ ಶತ್ರು ದೇಶ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಶತ್ರುಗಳ ಕ್ಷಿಪಣಿ ಹಾಗೂ ಡ್ರೋನ್’ಗಳನ್ನು ನಾವು ವಾಯು ಮಾರ್ಗದಲ್ಲೇ ಹೊಡೆದುರುಳಿಸಬೇಕಾದ ಅಗತ್ಯತೆ ಇದೆ ಎಂದು ಉಕ್ರೇನ್ ನ್ಯಾಟೋಗೆ ಮನವಿ ಮಾಡಿದೆ.

ಉಕ್ರೇನ್ ರಾಜಧಾನಿ ಕೀವ್’ನ ಆಗಸದಲ್ಲಿ ಕೆಳ ಮಟ್ಟದಲ್ಲಿಯೇ ಕಾಮಿಕಾಜಿ ಡ್ರೋನ್’ಗಳು ಹಾರಾಡುತ್ತಿವೆ. ಈ ಡ್ರೋನ್’ಗಳು ಜನ ವಸತಿ ಪ್ರದೇಶದ ಮೇಲೆ, ಅದರಲ್ಲೂ ಕ್ಷಿಪಣಿಗಳಿಂದ ಜನರನ್ನು ರಕ್ಷಿಸಲು ತಾತ್ಕಾಲಿಕ ವಸತಿ ನೀಡಿರುವ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

ಇನ್ನು ಡ್ರೋನ್’ಗಳನ್ನು ಗುರ್ತಿಸಿ ಅವುಗಳ ಮೇಲೆ ಉಕ್ರೇನ್ ಸೇನೆ ಗುಂಡಿನ ದಾಳಿ ನಡೆಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.