ಮಂಗಳೂರು(Mangalore): ಸುರತ್ಕಲ್ ಎನ್’ಐಟಿಕೆ ಬಳಿಯ ಟೋಲ್ ಗೇಟ್ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದು, ಇಂದು ಟೋಲ್ ಗೇಟ್ ತೆರವಿಗೆ ತೆರವಿಗೆ ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಕರೆದೊಯ್ದರು.
ಸರ್ಕಾರ ತೆಗೆದುಕೊಂಡಿದ್ದ ಅವಧಿ ಮುಗಿದಿದ್ದರಿಂದ ಇದೇ 18ರಂದು ತಾವೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್‌ಗೇಟ್ ತೆರವುಗೊಳಿಸುವುದಾಗಿ ಹೋರಾಟಗಾರರು ಬೆದರಿಕೆ ಹಾಕಿದ್ದರು.
ಪೊಲೀಸರು ಹೋರಾಟಗಾರರಿಗೆ ರಾತ್ರಿ ನೋಟಿಸ್ ಜಾರಿ ಮಾಡಿದ್ದರು. ಪೊಲೀಸರ ಈ ಕ್ರಮ ವಿರೋಧಿಸಿ ಪ್ರತಿಭಟನೆಯೂ ನಡೆದಿದ್ದವು. ಪೂರ್ವನಿಗದಿಯಂತೆ ಹೋರಾಟಗಾರರು ಮಂಗಳವಾರ ಈ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿ, ತೆರವುಗೊಳಿಸಲು ಯತ್ನಿಸಿದರು. ಟೋಲ್‌ಗೇಟ್ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಅವರನ್ನು ಬಂಧಿಸಿದರು.ಉಡುಪಿ–ಮಂಗಳೂರು ಮಧ್ಯದ ಈ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್ ಆರಂಭವಾಗುವವರೆಗೂ ತಾತ್ಕಾಲಿಕವಾಗಿ ಟೋಲ್ ಸಂಗ್ರಹ ಮಾಡಲು 2015ರಲ್ಲಿ ಸುರತ್ಕಲ್ ಟೋಲ್ ಕೇಂದ್ರ ಆರಂಭಿಸಲಾಯಿತು.
2016ರಲ್ಲಿ ಹೆಜಮಾಡಿ ಟೋಲ್ ಕೇಂದ್ರ ಆರಂಭವಾದರೂ ಸುರತ್ಕಲ್ ಟೋಲ್ ಬಂದ್ ಮಾಡಲಿಲ್ಲ. 6 ವರ್ಷಗಳಲ್ಲಿ ₹ 400 ಕೋಟಿ ಟೋಲ್ ಸಂಗ್ರಹಿಸಲಾಗಿದೆ. ಅ
ನಧಿಕೃತ ಟೋಲ್ ಕೇಂದ್ರ ಮುಚ್ಚುವಂತೆ ಹೋರಾಟ, ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.