ಮನೆ ಮನರಂಜನೆ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ಶರ್ಮಾ: ಈಡನ್‌ ಗಾರ್ಡನ್‌ ಅಂಗಳದಲ್ಲಿ ಚಿತ್ರೀಕರಣ

ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಅನುಷ್ಕಾ ಶರ್ಮಾ: ಈಡನ್‌ ಗಾರ್ಡನ್‌ ಅಂಗಳದಲ್ಲಿ ಚಿತ್ರೀಕರಣ

0

ಮುಂಬೈ(Mumbai): ನಟಿ–ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ತಮ್ಮ ಮುಂಬರುವ ಸಿನಿಮಾ ‘ಚಕ್ಡಾ ಎಕ್ಸ್‌’ಪ್ರೆಸ್‌’ ಚಿತ್ರೀಕರಣಕ್ಕಾಗಿ ಕೋಲ್ಕತ್ತದ ಈಡನ್‌ ಗಾರ್ಡನ್‌ ಅಂಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ಚಕ್ಡಾ ಎಕ್ಸ್‌ಪ್ರೆಸ್’ ಭಾರತ ಕ್ರಿಕೆಟ್‌ ತಂಡದ ಬೌಲಿಂಗ್‌ ದಂತಕಥೆ ವೇಗಿ ಜೂಲನ್‌ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಇದರಲ್ಲಿ ಅನುಷ್ಕಾ ಅವರು ಜೂಲನ್‌ ಪಾತ್ರ ನಿಭಾಯಿಸುತ್ತಿದ್ದಾರೆ.

ಜೂಲನ್‌ ಅವರಂತೆ ಕೇಶ ವಿನ್ಯಾಸ ಹಾಗೂ ಭಾರತ ಕ್ರಿಕೆಟ್‌ ತಂಡದ ಜೆರ್ಸಿ ತೊಟ್ಟಿರುವ ಅನುಷ್ಕಾ ಅವರ ಚಿತ್ರಗಳು ವೈರಲ್‌ ಆಗಿವೆ.

ಭಾರತ ಹಾಗೂ ಇಂಗ್ಲೆಂಡ್‌ನ್ಲಲಿ ಚಿತ್ರೀಕರಣ ಸಾಗಿದ್ದು, ಈ ಸಿನಿಮಾವನ್ನು ಪ್ರೋಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ. ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್‌ ನಿರ್ಮಾಣದ ಹೊಣೆ ಹೊತ್ತಿದೆ.ಮಹಿಳೆಯರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು (255) ವಿಕೆಟ್‌ ಪಡೆದ ದಾಖಲೆ ಜೂಲನ್‌ ಅವರ ಹೆಸರಲ್ಲಿದೆ.

ಪದ್ಮಶ್ರೀ ಪ್ರಶಸ್ತಿ (2012) ಪಡೆದ 2ನೇ ಮಹಿಳಾ ಕ್ರಿಕೆಟರ್‌ ಎಂಬ ಶ್ರೇಯವೂ ಅವರದ್ದು.ಕ್ರಿಕೆಟಿಗರಾಗುವ ಮಹತ್ವಾಕಾಂಕ್ಷೆ ಹೊಂದಿರುವ ಸಾಕಷ್ಟು ಯುವಕರಿಗೆ ಸ್ಫೂರ್ತಿಯಾಗಿರುವ ಜೂಲನ್‌ ಅವರ ಗೌರವಾರ್ಥವಾಗಿ ಭಾರತೀಯ ಅಂಚೆ ಇಲಾಖೆಯು 2018ರಲ್ಲಿ ಅವರ ಚಿತ್ರವಿರುವ ಸ್ಟ್ಯಾಂಪ್‌ ಹೊರತಂದಿತ್ತು.