ಮನೆ ಸುದ್ದಿ ಜಾಲ ಒಂದು ವರ್ಷದಲ್ಲಿ ಮೂರು ಬಾರಿ ಭರ್ತಿಯಾದ ಕೆ.ಆರ್.ಎಸ್ ಜಲಾಶಯ

ಒಂದು ವರ್ಷದಲ್ಲಿ ಮೂರು ಬಾರಿ ಭರ್ತಿಯಾದ ಕೆ.ಆರ್.ಎಸ್ ಜಲಾಶಯ

0

ಮೈಸೂರು(Mysuru): ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗುವ ಮೂಲಕ ಕೆಆರ್’ಎಸ್ ಜಲಾಶಯ ಹೊಸ ದಾಖಲೆ ಬರೆದಿದೆ.

ರಾಜ್ಯದಲ್ಲಿ ಜೂನ್‌ ತಿಂಗಳ ಆರಂಭದಿಂದಲೇ ಶುರುವಾದ ಮಳೆ ಆರ್ಭಟ ಇನ್ನೂ ಮುಂದುವರಿದಿದೆ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಇದರ ಜತೆಗೆ ಕೆಆರ್’ಎಸ್ ಜಲಾಶಯವೂ ಭರ್ತಿಯಾಗಿರುವುದರಿಂದ ನದಿ ಮತ್ತು ನಾಲೆಗಳೂ ಉಕ್ಕಿ ಹರಿಯುತ್ತಿವೆ.
ಈ ವರ್ಷ ಜುಲೈ, ಸೆಪ್ಟೆಂಬರ್ ಹಾಗೂ ಇದೀಗ ಅಕ್ಟೋಬರ್ ತಿಂಗಳಿನಲ್ಲಿ ಕೆಆರ್’ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.

ಕೆಆರ್’ಎಸ್’ನ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ ಅಣೆಕಟ್ಟೆ ಭರ್ತಿಯಾಗಿರುವುದು 6ನೇ ಬಾರಿ. ಈ ಹಿಂದೆ 1980, 2006, 2007, 2009, 2018ರಲ್ಲಿ ಜುಲೈ ತಿಂಗಳಲ್ಲೇ ಅಣೆಕಟ್ಟೆ ಭರ್ತಿಯಾಗಿತ್ತು.
124.80 ಗರಿಷ್ಠ ಅಡಿಗಳಿರುವ ಕೆಆರ್’ಎಸ್ ಡ್ಯಾಂ ಸದ್ಯ ಪೂರ್ತಿ ಭರ್ತಿಯಾಗಿದ್ದು, ಬುಧವಾರ ಒಳಹರಿವಿನ ಪ್ರಮಾಣ 26196 ಕ್ಯೂಸೆಕ್ ಇದ್ದು, ಹೊರ ಹರಿವಿನ ಪ್ರಮಾಣ 25489 ಕ್ಯೂಸೆಕ್ ಇದೆ. ಅಣೆಕಟ್ಟೆಯಲ್ಲಿ 49.452 ಟಿಎಂಸಿ ಗರಿಷ್ಠ ಸಂಗ್ರಹದ ನೀರು ಭರ್ತಿಯಾಗಿದೆ.