ಮನೆ ರಾಜಕೀಯ ಹಲಾಲ್ ಮುಕ್ತ ದೀಪಾವಳಿ: ಅಸಮಾಧಾನ ಹೊರ ಹಾಕಿದ ಜಮೀರ್ ಅಹಮದ್ ಖಾನ್

ಹಲಾಲ್ ಮುಕ್ತ ದೀಪಾವಳಿ: ಅಸಮಾಧಾನ ಹೊರ ಹಾಕಿದ ಜಮೀರ್ ಅಹಮದ್ ಖಾನ್

0

ಹುಬ್ಬಳ್ಳಿ(Hubballi): ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಕುರಿತು ಹೇಳಲಿಕ್ಕೆ ಅವರು ಯಾರು? ಯಾರೋ ಒಬ್ಬರು ಹೇಳಿದ ತಕ್ಷಣ ಹಲಾಲ್ ಖರೀದಿ ಮಾಡುವುದು ಬಿಡಲ್ಲ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಹಲಾಲ್ ನಿಷೇಧ ಕುರಿತು ಹೇಳಿದ ತಕ್ಷಣ ಯಾರು ಖರೀದಿ ಮಾಡುವುದು ಬಿಡುವುದಿಲ್ಲ. ಎಲ್ಲಿಯೂ ಹಲಾಲ್ ಹಾಗೂ ಮುಸ್ಲಿಂರು ಮಾರುವ ವಸ್ತುಗಳನ್ನು ಖರೀದಿಸುವುದನ್ನು ಬಿಟ್ಟಿಲ್ಲ. ಇದು ಇವತ್ತಿನಿಂದ ನಡೆದಿದ್ದಲ್ಲ. ಮೊದಲಿನಿಂದಲೂ ನಡೆದಿದೆ. ಹಲಾಲ್ ಹೇಳಿಕೆ ಮೂಲಕ ಸಾಮಾಜಿಕ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಭಾರತ ಜೋಡೋ ಯಾತ್ರೆಯಿಂದ ಪಕ್ಷಕ್ಕೆ ಬಲ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆ ಯಶಸ್ವಿಯಾಗುತ್ತಿರುವ ಭಯದಿಂದಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದೆ. ರಾಹುಲ್ ಅವರ ಐತಿಹಾಸಿಕ ಪಾದಯಾತ್ರೆಯಿಂದ ಪಕ್ಷದ ಸಂಘಟನೆ ಬಲಗೊಳ್ಳುತ್ತಿದೆ. ಇದು ಬಿಜೆಪಿಗರಿಗೆ ಭಯ ಹುಟ್ಟಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಹ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ ಎಂದರು.