ಮನೆ ರಾಜ್ಯ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ ಆಯುರ್ವೇದ ಗಿಡಮರ ಬೆಳೆಸಲು ಜಿಲ್ಲಾಡಳಿತ ಮುಂದಾಗಲಿ: ಸಿ.ಎನ್.ಮಂಜೇಗೌಡ ಆಗ್ರಹ

ಚಾಮುಂಡಿ ಬೆಟ್ಟದ ಅರಣ್ಯದಲ್ಲಿ ಆಯುರ್ವೇದ ಗಿಡಮರ ಬೆಳೆಸಲು ಜಿಲ್ಲಾಡಳಿತ ಮುಂದಾಗಲಿ: ಸಿ.ಎನ್.ಮಂಜೇಗೌಡ ಆಗ್ರಹ

0

ಮೈಸೂರು: ಮೈಸೂರಿನಲ್ಲಿ ಚಾಮುಂಡಿಬೆಟ್ಟ ಸೇರಿದಂತೆ ಇನ್ನಿತರ ಅರಣ್ಯವಲಯಗಳಲ್ಲಿ ಆಯುರ್ವೇದ ಗಿಡಮರಗಳನ್ನ ಬೆಳಸಲು ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜೇಗೌಡ ಅಭಿಪ್ರಾಯಪಟ್ಟರು.

ಅರಿವು ಸಂಸ್ಥೆಯ ವತಿಯಿಂದ ಜಯನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಆಯುಷ್ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಆಯುರ್ವೇದ ಗಿಡಮೂಲಿಕೆಗಳನ್ನು ನೆಡುವ ಮೂಲಕ ಮಕ್ಕಳಿಗೆ ಆಯುರ್ವೇದದಿಂದ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಭಾರತದಲ್ಲಿ ಅಯುರ್ದೇದಕ್ಕೆ ಸಾವಿರಾರು ವರ್ಷಗಳ ಪರಂಪರೆ ಇತಿಹಾಸ ಮಹತ್ವವಿದೆ, ಋಷಿಮುನಿಗಳು ಮತ್ತು ನಮ್ಮ  ಪೂರ್ವಜರು ಪರಿಸರದಲ್ಲಿ ನೈಸರ್ಗಿಕವಾಗಿ ಬೆಳೆದ ಗಿಡಮರಗಳಿಂದ ಚಳಿಗಾಲ ಮಳೆಗಾಲ ಬೇಸಿಗೆಗಾಲದಲ್ಲಿ ಸಂಬಂದಪಟ್ಟಂತೆ ನೈಸರ್ಗಿಕ ಔಷಧಿಯುಕ್ತ ಆಹಾರಗಳನ್ನ ಸಿದ್ಧಪಡಿಸುತ್ತಿದ್ದರು. ಆದ್ದರಿಂದ ಮನುಷ್ಯನ ಜೀವಿತಾವಧಿ ಆಯಸ್ಸು ವೃದ್ಧಿಸುತ್ತಿತ್ತು. ಆದರೆ ಇಂದು ಎಲ್ಲವೂ ರಾಸಾಯನಿಕ ಕಲುಷಿತ ಆಹಾರಗಳು ಮನುಷ್ಯನ ನೆಮ್ಮದಿ ಹಾಳು ಮಾಡುತ್ತಿದೆ, ಕೊರೋನಾದಿಂದ ಗುಣಮುಖವಾಗಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ರಾಮಬಾಣವಾಯಿತು ಎಂದು ಹೇಳಿದರು.

ಯುವಪೀಳಿಗೆಯಲ್ಲಿ ವಿದ್ಯಾರ್ಥಿಗಳಲ್ಲಿ ಆಯುರ್ವೇದಿಂದ ಆಚರಣೆ ಆರೋಗ್ಯ ಆಹಾರ ಮಹತ್ವವನ್ನ ತಿಳಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಬೇಕಾಗಿದೆ, ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೇ ಕೆಲವು ಹರ್ಬಲ್ ಕಂಪನಿಗಳು ನಿರ್ಮಿತವಾಗಿ ಜನರ ಬಳಿ ಆರೋಗ್ಯ ಕಳಕಳಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಪುರಾಣಗಳಲ್ಲಿ ಉಲ್ಲೇಖವಿರುವಂತೆ ಮನುಷ್ಯನಾಗಿ ಜನಿಸಿದ ಮೇಲೆ ಆತನ ಎತ್ತರಕ್ಕೆ 5 ಸಸಿಗಳನ್ನು ನೆಡುವುದು ಕರ್ತವ್ಯ, ಕೊರೋನಾ ಸಂಧರ್ಭದಲ್ಲಿ ಮುಂದಿನ ಪೀಳಿಗೆಗೆ ಆಮ್ಲಜನಕ ಎಷ್ಟರ ಮಟ್ಟಿಗೆ ಅನಿವಾರ್ಯತೆ ಎಂದು ಪ್ರಕೃತಿ  ತೋರಿಸಿಕೊಟ್ಟಿದೆ, ಗಿಡಮೂಲಿಕೆ ಮರಗಿಡಗಳು ಇದಷ್ಟು ಭೂಮಂಡಲ ಬೆಳವಣಿಗೆ ಚೆನ್ನಾಗಿರುತ್ತದೆ. ರಾಮಾಯಣದಲ್ಲಿ ಲಕ್ಷ್ಮಣನಿಗೆ ಆರೋಗ್ಯ ಏರುಪೇರಾದಾಗ ಸಂಜೀವಿನಿ ಗಿರಿಯನ್ನ ಹೊತ್ತು ತಂದ ಆಂಜನೇಯ ಆಯುರ್ವೇದ ಗಿಡಮೂಲಿಕೆ ಮಹತ್ವ , ಮನುಷ್ಯನಿಗೆ ಆಹಾರ ಪದ್ದತಿಯೂ ಸಹ ಬಹಳ ಮುಖ್ಯ ಬದುಕಿಗಾಗಿ ಪೌಷ್ಠಿಕಾಂಶ ಆಹಾರ  ಸೇವಿಸಬೇಕೆ ವಿನಃ ಆರೋಗ್ಯ ಕಳೆದುಕೊಳ್ಳಲು ಮುಂದಾಗಬಾರದು ಎಂದರು.

ಸರ್ಕಾರಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಮಾತನಾಡಿ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು ಇಂದು ವಿಶ್ವದ ಗಮನ ಸೆಳೆದಿದೆ .ಸಹಜ ಬದುಕಿನ ಆಹಾರಶೈಲಿಯಲ್ಲಿ ಆಯುರ್ವೇದದ ಚಿಕಿತ್ಸೆ ಗುಣಗಳ ಅಂಶಗಳಿದ್ದು ಇದಕ್ಕೆ ಹೆಚ್ಚು ಒತ್ತು ಕೊಡಬೇಕಿದೆ  ಎಂದರು.

ಈ ಹಿಂದೆ ಆಯುರ್ವೇದ ಕಾರಣಕ್ಕೆ ತಾವು ತಿನ್ನುವ ಆಹಾರದಲ್ಲಿ ಔಷಧಿಯ ಗುಣವಿತ್ತು .ಇಂದು ಔಷಧಿಗಳೇ ಆಹಾರ ಕ್ರಮವಾಗಿ ಇರುವುದು ವಿಪರ್ಯಾಸದ ಸಂಗತಿ .ಆಯುರ್ವೇದದ ಗಿಡಗಳ ಪೋಷಣೆ ಮೂಲಕ ಮಕ್ಕಳಿಗೆ ಚಿಕ್ಕಂದಿನಲ್ಲೇ ಸೊಪ್ಪು ತರಕಾರಿ ಸೇವನೆ ಯ ಅಂಶಗಳು ಹಾಗೂ ಆಯುರ್ವೇದದ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎನ್ .ಎಂ.ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ  ವಿಕ್ರಮ ಅಯ್ಯಂಗಾರ್ , ಅರಿವು ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಅಜಯ್ ಶಾಸ್ತ್ರಿ, ಶಿವಕುಮಾರ್, ಸುಚೀಂದ್ರ , ಮುಖ್ಯ ಶಿಕ್ಷಕರಾದ ಶಿವಕುಮಾರ್ ಹಾಗೂ ಸಹ ಶಿಕ್ಷಕರಾದ ಸುಜ್ಞಾನ ಮೂರ್ತಿ  ಹಾಜರಿದ್ದರು.