ಮೈಸೂರು(Mysuru): ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಹೋಗುತ್ತಿದ್ದ ಸಂದರ್ಭದಲ್ಲಿ ರೈತರು ದಿಗ್ಬಂಧನ ಹಾಕಿದರು.
ಮಿನಿ ವಿಧಾನಸೌಧದ ಮುಖ್ಯ ದ್ವಾರದಲ್ಲಿ ಸಾಗುವಳಿ ಪತ್ರಕ್ಕೆ ಆಗ್ರಹಿಸಿ ರೈತರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು. ಈ ವೇಳೆ ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಸ್ಥಳದಿಂದ ತೆರಳಿದ ಶಾಸಕರಿಗೆ ಕಾರಿನ ಸಮೇತ ಪ್ರತಿಭಟನಾನಿರತ ರೈತರು ದಿಗ್ಭಂಧನ ಹಾಕಿದರು. ರೈತರು ಮತ್ತು ಶಾಸಕರ ನಡುವೆ ಕೆಲಕಾಲ ಗೊಂದಲದ ವಾತಾವರಣ ಸಂಭವಿಸಿ ಮಾತಿನ ಚಕಮಕಿ ನಡೆಯಿತು.
ಈ ಸಮಯದಲ್ಲಿ ರೈತರು ಸರ್ಕಾರ ಮತ್ತು ಶಾಸಕರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ನಂತರ ಶಾಸಕ ಅನಿಲ್ ಚಿಕ್ಕಮಾದು ರೈತರ ಮನವೊಲಿಸಿದ್ದು, ಇದೇ ತಿಂಗಳ 29ಕ್ಕೆ ಸಾಗುವಳಿ ಪತ್ರ ನೀಡುವುದಾಗಿ ಭರವಸೆ ಕೊಟ್ಟರು. ಕಾರಣ ಹೇಳದೆ ಅ.29ಕ್ಕೆ ಸಾಗುವಳಿ ಪತ್ರ ಕಡ್ಡಾಯವಾಗಿ ವಿತರಿಸುವುದಾಗಿ ಹೇಳಿ ಬಳಿಕ ಶಾಸಕ ಅನಿಲ್ ಚಿಕ್ಕಮಾದು ಸ್ಥಳದಿಂದ ನಿರ್ಗಮಿಸಿದರು. ಅ.29ಕ್ಕೆ ಸಾಗುವಳಿ ಪತ್ರ ನೀಡದೇ ಇದ್ದರೆ ಮುಂದಿನ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.














