ಮನೆ ಸುದ್ದಿ ಜಾಲ 9 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಆದೇಶ: ಆರೀಫ್ ಮೊಹಮ್ಮದ್ ಖಾನ್

9 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಆದೇಶ: ಆರೀಫ್ ಮೊಹಮ್ಮದ್ ಖಾನ್

0

 ನವದೆಹಲಿ(NewDelhi):  ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ಕೇರಳ ರಾಜ್ಯದ ರಾಜ್ಯಪಾಲರಾದ ಆರೀಫ್ ಮೊಹಮ್ಮದ್ ಖಾನ್ ಅವರು ಆದೇಶಿಸಿದ್ದಾರೆ.

ಈ ಪೈಕಿ ಕ್ಯಾಲಿಕಟ್, ಸಂಸ್ಕೃತ, ಕೆಟಿಯು, ಸಿಯುಎಸ್‌ ಎಟಿ, ಮೀನುಗಾರಿಕೆ ಮಲಯಾಳಂ, ಎಂಜಿ, ಕಣ್ಣೂರು, ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ನಾಗರೀಕ ಮನವಿ ಸಂಖ್ಯೆ 2022ರ 7634 -7635 ಎಸ್‌ಎಲ್‌ಪಿ(ಸಿ) ಸಂಖ್ಯೆ 21108 -21109 -2021)ರ ಆದೇಶವನ್ನು ಎತ್ತಿಹಿಡಿಯುತ್ತಾ ರಾಜ್ಯಪಾಲ ಆರೀಫ್ ಮೊಹಮ್ಮದ್ ಅವರು ಸೂಚನೆ ನೀಡಿದ್ದಾರೆ.

ತಿರುವನಂತಪುರಂನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿದ್ದಂತಹ ಕುಲಪತಿಗಳ ವಿಚಾರದಲ್ಲಿ ಮಾನ್ಯ ಸರ್ವೊಚ್ಛ ನ್ಯಾಯಾಲಯವು ಆ ನೇಮಕಾತಿ ಕಾನೂನುಬಾಹಿರ ಮತ್ತು ಯುಜಿಸಿ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸೂಚಿಸಿ ಆ ನೇಮಕಾತಿಯನ್ನು ರದ್ದು ಪಡಿಸಿತು.

ನ್ಯಾಯಾಧೀಶರಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠವು, ಯೂನಿವರ್ಸಿಟಿ ಗ್ರ್ಯಾಂಡ್ ಕಮೀಷನ್‌ ನ ಪ್ರಕಾರ, ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿದ್ದಂತಹ ಪರಿಶೋಧನಾ ಸಮಿತಿಯು, ಇಂಜಿನಿಯರಿಂಗ್ ವಿಜ್ಞಾನ ಕ್ಷೇತ್ರವನ್ನೂ ಒಳಗೊಂಡಂತೆ ಕುಲಪತಿಗಳ ಹುದ್ದೆಗೆ ಕನಿಷ್ಠ ಮೂರು ಸಮರ್ಥ ಅಭ್ಯರ್ಥಿಗಳನ್ನು ಗುರುತಿಸಿ ಶಿಫಾರಸ್ಸು ಮಾಡಬೇಕಿತ್ತು. ಆದರೆ ಕೇವಲ ಡಾ. ರಾಜಶ್ರೀ ಎಂ.ಎಸ್. ಅವರ ಹೆಸರನ್ನು ಮಾತ್ರ ಕಳುಹಿಸಲಾಗಿತ್ತು ಎಂದು ತಿಳಿಸಿದೆ.