ಲಂಡನ್(London): ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಿಂದ ಬ್ರಿಟನ್ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದ ಭಾರತ ಮೂಲದ ರಿಷಿ ಸುನಕ್ ಅವರನ್ನು ಕಿಂಗ್ ಚಾರ್ಲ್ಸ್ -3 ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.
ಈ ಮೂಲಕ ದೀಪಾವಳಿಯಂದೇ ರಿಷಿ ಸುನಕ್ ಹೊಸ ಇತಿಹಾಸ ರಚಿಸಿದ್ದಾರೆ.
ಸೋಮವಾರ ಫಲಿತಾಂಶ ಪ್ರಕಟವಾದ ಕೂಡಲೇ ಆಡಳಿತಾರೂಢ ಪಕ್ಷದ ನಾಯಕನಾಗಿ ತನ್ನ ಮೊದಲ ಭಾಷಣ ಮಾಡಿದ ಸುನಕ್, ದೇಶ ಒಟ್ಟುಗೂಡಿಸುವುದು ತನ್ನ ಆದ್ಯತೆ. ದೇಶಸೇವೆ ಮಾಡಲು ತನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಋಣಿಯಾಗಿದ್ದೇನೆ ಎಂದು ಹೇಳಿದ್ದರು.
Saval TV on YouTube