ಮನೆ ಕ್ರೀಡೆ ಟೆನ್ನಿಸ್’ನಿಂದ ನಿವೃತ್ತಿಯಾಗಿಲ್ಲ, ಮರಳುವ ಸಾಧ್ಯತೆ ಇದೆ: ಸೆರೆನಾ ವಿಲಿಯಮ್ಸ್

ಟೆನ್ನಿಸ್’ನಿಂದ ನಿವೃತ್ತಿಯಾಗಿಲ್ಲ, ಮರಳುವ ಸಾಧ್ಯತೆ ಇದೆ: ಸೆರೆನಾ ವಿಲಿಯಮ್ಸ್

0

ಸ್ಯಾನ್ ಫ್ರಾನ್ಸಿಸ್ಕೋ: ನಾನು ಟೆನಿಸ್’ನಿದ ನಿವೃತ್ತಿಯಾಗಿಲ್ಲ. ಮತ್ತೆ ಕ್ರೀಡೆಗೆ ಮರಳುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ನೀಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ತಮ್ಮ ಸಂಸ್ಥೆ ‘ಸೆರೆನಾ ವೆಂಚರ್ಸ್’ ಪ್ರಚಾರ ಮಾಡುವ ವೇಳೆ ಮಾತನಾಡಿದ  ಸೆರೆನಾ, ನಾನು ನಿವೃತ್ತಿಯಾಗಿಲ್ಲ ಎಂದಿದ್ದಾರೆ. ವಾಪಸ್ ಹಿಂದಿರುಗುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದಿದ್ದಾರೆ.

ಟೆನಿಸ್’ನಿಂದ ದೂರವಾಗುತ್ತಿರುವುದಾಗಿ 41 ವರ್ಷದ ವಿಲಿಯಮ್ಸ್ ಅವರು ಆಗಸ್ಟ್’ನಲ್ಲಿ ಹೇಳಿದ್ದರು.  ಮೂರನೇ ಸುತ್ತಿನಲ್ಲಿ ಸೋತ ನಂತರ ಅವರಿಗೆ ಭಾವನಾತ್ಮಕ ವಿದಾಯವನ್ನು ನೀಡಲಾಗಿತ್ತು. ಕಳೆದ ತಿಂಗಳು ನಡೆದಿದ್ದ ಅಮೆರಿಕನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ನಂತರ ಸೆರೆನಾ ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು.

ಇದು ನನ್ನ ಉಳಿದ ಜೀವನದ ಆರಂಭಿಕ ದಿನದಂತೆ ಭಾಸವಾಗುತ್ತಿದೆ. ನಾನು ಅದನ್ನು ಆನಂದಿಸುತ್ತಿದ್ದೇನೆ. ಆದರೆ ನಾನು ಈಗಲೂ ಆ ದಿನಗಳಂಥ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ  ಎಂದು ಸೆರೆನಾ ಹೇಳಿದ್ದಾರೆ.

ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ, ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ, ಅಂದರೆ ಬಹಳ ನಿರ್ದಿಷ್ಟವಾದ ವಿಷಯ ಮತ್ತು ಜನರ ಸಮುದಾಯಕ್ಕೆ ಮುಖ್ಯವಾಗಿದೆ ಎಂದು ಸೆರೆನಾ ವೋಗ್ ಮ್ಯಾಗಜೀನ್’ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.