ಮನೆ ಸುದ್ದಿ ಜಾಲ ದೀಪವು ಮನೆ, ಬದುಕನ್ನು ಬೆಳಗುವ ಶಕ್ತಿ ಹೊಂದಿದೆ: ಸವಿತಾ ಘಾಟ್ಕೆ

ದೀಪವು ಮನೆ, ಬದುಕನ್ನು ಬೆಳಗುವ ಶಕ್ತಿ ಹೊಂದಿದೆ: ಸವಿತಾ ಘಾಟ್ಕೆ

0

ಮೈಸೂರು(Mysuru): ದೀಪವು ಮನೆ ಮತ್ತು ಬದುಕನ್ನು ಬೆಳಗುತ್ತದೆ. ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದ್ದು, ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯು ಕೆಟ್ಟದನ್ನು ಭಸ್ಮಗೊಳಿಸಿ, ಸುಂದರ ಜೀವನ ರೂಪಿಸಲು ಸಹಕಾರಿ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷೆ ಸವಿತಾ ಘಾಟ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಪೌರಕಾರ್ಮಿಕರ ಜೊತೆ  ಭಾರತ ಮಾತೆಯ ಅಖಂಡ ದೀಪ ಪ್ರಜ್ವಲನ ಹಾಗೂ ಪೌರಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ  ವಸ್ತ್ರ ದೀಪ ಸಿಹಿ ಮೂಲಕ  ಶುಭ ಕೋರಿ ಮಾತನಾಡಿದರು.

ಸಾವಿರಾರು ವರ್ಷಗಳಿಂದ ಈ ದೇಶದ ಮೇಲೆ ಅನೇಕರು ದಾಳಿ ನಡೆಸಿದ್ದಾರೆ. ಪ್ರಪಂಚದಲ್ಲಿ ಭಾರತದ ಮೇಲೆ ಆದಷ್ಟು ದಾಳಿಗಳು ಇನ್ಯಾವ ದೇಶಕ್ಕೂ ಆಗಿಲ್ಲ. ಜಗತ್ತಿನಲ್ಲಿ 45 ಸಂಸ್ಕೃತಿಗಳು ಇವೆ. ಆದರೆ ಇಂದು ಅದ್ಯಾವ ಸಂಸ್ಕೃತಿಗಳೂ ಉಳಿದಿಲ್ಲ. ಹಿಂದು ಸಂಸ್ಕೃತಿ ಉಳಿದೆ. ನಮ್ಮ ಮನೆಗಳಲ್ಲಿ, ಪರಂಪರೆ, ಆಚರಣೆಯನ್ನು ಕಾಪಾಡಿಕೊಂಡು ಪಾಲಿಸುತ್ತಿರುವುದರಿಂದ ಭಾರತ ದೇಶ ಜೀವಂತವಾಗಿದೆ. ಹಿಂದು ಸಂಸ್ಕೃತಿಯಲ್ಲಿ ಜೀವನ ಪದ್ದತಿಯಲ್ಲಿ ವಿವಿಧತೆ ಇದೆ. ಈ ಆಚಾರ ಪದ್ಧತಿಗಳಿಂದ ನಮ್ಮ ಸಂಸ್ಕೃತಿ ಭದ್ರವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಭಾಗ್ಯವತಿ, ವನಿತಾ, ಪ್ರೇಮಕುಮಾರಿ , ಪವನ್ , ಕದಂ, ರಿತೇಶ್, ಪೌರಕಾರ್ಮಿಕರಾದ ಪಲ್ಲವಿ , ಲಕ್ಷ್ಮಿ, ಮಂಜು , ಮನ್ನಮ್ಮ, ಪನ್ನಮ್ಮ, ಬನ್ನಮ್ಮ, ಲಕ್ಷ್ಮಿ,   ಮಾದಮ್ಮ, ಮಂಜುಳ, ಪಲ್ಲವಿ,  ನವೀನ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.