ಮನೆ ಅಪರಾಧ ಬಳ್ಳಾರಿ: ಪತ್ನಿ ಶೀಲ ಶಂಕಿಸಿ ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

ಬಳ್ಳಾರಿ: ಪತ್ನಿ ಶೀಲ ಶಂಕಿಸಿ ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಪತಿ

0

ಬಳ್ಳಾರಿ: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆಗೈದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಜಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೇಖಾ (30) ಪತಿಯಿಂದ ಕೊಲೆಯಾದ ಮಹಿಳೆ. ಕುಮಾರಸ್ವಾಮಿ (35) ಆತ್ಮಹತ್ಯೆಗೆ ಶರಣಾದ ಪತಿ.

12 ವರ್ಷದ ಹಿಂದೆ ರೇಖಾಳನ್ನ ಮದುವೆಯಾಗಿದ್ದ ಕುಮಾರಸ್ವಾಮಿಗೆ 5 ಜನ ಮಕ್ಕಳಿದ್ದು, ಈಗ ಮಕ್ಕಳು ಅನಾಥರಾಗಿದ್ದಾರೆ.

ಹಾಗಿದ್ದರೂ ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಕುಮಾರಸ್ವಾಮಿ, ಜಿಗೇನಹಳ್ಳಿ ಗ್ರಾಮದ ಜಮೀನಿಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕೂಡ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚೋರನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.