ಮನೆ ಅಡುಗೆ ಬ್ರೊಕೋಲಿ ಸೂಪ್

ಬ್ರೊಕೋಲಿ ಸೂಪ್

0

ಬ್ರೊಕೋಲಿ ಸೂಪ್ ನಿಮ್ಮ ಆಹಾರದಲ್ಲಿ ಸೇರಿಸಲು ರುಚಿಯಾದ ಮತ್ತು ಆರೋಗ್ಯಕರವಾದ ಒಂದು ರೆಸಿಪಿಯಾಗಿದೆ. ಇದು ತುಂಬಾ ರುಚಿಕರವಾಗಿರುವ ಜೊತೆಗೆ ನಿಮ್ಮನ್ನು ಪೂರ್ಣ ವಾಗಿಸುತ್ತದೆ. ಬ್ರೊಕೋಲಿ ಒಂದು ಆರೋಗ್ಯಯುತವಾದಂತಹ ಪದಾರ್ಥವಾಗಿದ್ದು, ನಿಮ್ಮ ಕ್ಯಾಲೊರಿಗಳನ್ನು ಕಡಿಮೆ ಮಾಡುವಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.

ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಲು ಕ್ರೀಮನ್ನು ಬಿಟ್ಟು ಆಲಿವ್ ಎಣ್ಣೆಯನ್ನು ಇದಕ್ಕೆ ಸೇರಿಸಿಕೊಳ್ಳಿ.ಇದು ಒಂದು ಉತ್ತಮ ಆರೋಗ್ಯಯುತ ಪೌಷ್ಟಿಕ ಆಹಾರ ಎನ್ನುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಅಲ್ಲದೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.ತಾಜಾ ಬ್ರೊಕೋಲಿ ಯೊಂದಿಗೆ ಕೇವಲ ಕೆಲವು ಪದಾರ್ಥಗಳೊಂದಿಗೆ ತಯಾರಿಸಲಾಗುವ ಇದನ್ನು ರಾತ್ರಿಯ ಊಟದ ಸಮಯದಲ್ಲಿ ಸೇವಿಸುವಂತಹ ಒಂದು ಸೂಪ್ ಆಗಿದೆ.

 (ಬಡಿಸುವ ಪ್ರಮಾಣ: 2)

ಪ್ರಮುಖ ಸಾಮಗ್ರಿ

• 1 – ಬ್ರೊಕೋಲಿ

ಮುಖ್ಯ ಅಡುಗೆಗೆ

• 1 – ಈರುಳ್ಳಿ

• 1 – ಆಲೂಗಡ್ಡೆ

• 4 cloves ಬೆಳ್ಳುಳ್ಳಿ

• 1 ಚಮಚ ದೊಡ್ಡಪತ್ರೆ

• 1/2 ಕಪ್ ಹಾಲು

• 1/2 ಕಪ್ ಚೆಡಾರ್ ಚೀಸ್

• ಅಗತ್ಯ ತಕ್ಕಷ್ಟು ಬೆಣ್ಣೆ

• ಅಗತ್ಯ ತಕ್ಕಷ್ಟು ಕರಿಮೆಣಸು

Step 1:

ಒಂದು ಬಾಣಲೆಯಲ್ಲಿ ಬ್ರೊಕೋಲಿ ಜೊತೆಗೆ, ಬೆಳ್ಳುಳ್ಳಿ ಮತ್ತು ಒಂದು ಚಿಟಿಕೆ ಉಪ್ಪನ್ನು ಸೇರಿಸಿ. ಇದೆಲ್ಲದರ ಮಿಶ್ರಣವನ್ನು ಐದರಿಂದ ಹತ್ತು ನಿಮಿಷಗಳ ಕಾಲ ಹಾಗೆಯೇ ಕುದಿಯಲು ಬಿಡಿ. ಅನಂತರದಲ್ಲಿ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.

Step 2:

ಬಾಣಲೆಯಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಈ ಮಿಶ್ರಣವು ತಣ್ಣಗಾದನಂತರ,ಬೇಯಿಸಿದ ಬ್ರೊಕೋಲಿ ಮತ್ತು ಇತರ ಪದಾರ್ಥಗಳೊಂದಿಗೆ ಅದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.ಈ ರೀತಿ ಚೆನ್ನಾಗಿ ಪೇಸ್ಟ್ ಮಾಡಿಕೊಂಡಂತಹ ಎಲ್ಲಾ ಪದಾರ್ಥಗಳನ್ನು ಒಂದು ಕಡೆ ಇಟ್ಟುಕೊಳ್ಳಿ.

Step 3:

ರುಬ್ಬಿಕೊಂಡ ಬ್ರೊಕೋಲಿ ಮತ್ತು ಇತರ ಎಲ್ಲಾ ಪದಾರ್ಥಗಳನ್ನು ಫ್ಯೂರಿ ರೂಪಕ್ಕೆ ತಂದುಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ತಿರುಗಿ ಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಪ್ರಮಾಣದ ಹಾಲನ್ನು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಹಾಕಿದ ನಂತರ ಮಧ್ಯಮ ಉರಿಯಲ್ಲಿ ಚೆನ್ನಾಗಿ ನಯವಾಗುವವರೆಗೂ ಬೇಯಿಸಿಕೊಳ್ಳಿ.ಅಂದರೆ ಈಗಾಗಲೇ ಬ್ರೊಕೋಲಿಯನ್ನು ಬೇಯಿಸಿಕೊಂಡಿರುವುದರಿಂದ ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ.

Step 4:

ಸ್ವಲ್ಪ ಒರೆಗಾನೋ ಜೊತೆಗೆ ಉಪ್ಪು ಮತ್ತು ಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಾಲ್ಕರಿಂದ ಐದು ನಿಮಿಷಗಳವರೆಗೆ ಚೆನ್ನಾಗಿ ಬೇಯಿಸಿ. ನಂತರದಲ್ಲಿ ಇದನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸೇವಿಸಿ.ಇದು ಉತ್ತಮವಾದ ಆರೋಗ್ಯಕರ ಆಯ್ಕೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಬ್ರೊಕೋಲಿ ಯಲ್ಲಿ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಇರುತ್ತವೆ.ಆದ್ದರಿಂದ ಇದರಿಂದ ತಯಾರಿಸಿದ ಸೂಪ್ ಸೇವಿಸುವುದರಿಂದ ನಿಮಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತದೆ.