ಮೈಸೂರು: ಮೈಸೂರಿನ ಪ್ರತಿಷ್ಠಿತ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾನ್ಸರ್ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ವಿವಿಧ ಕ್ಯಾನ್ಸರ್‌ಗಳ ಹರಡುವಿಕೆ, ಪತ್ತೆ, ಅರಿವು ಮತ್ತು ಚಿಕಿತ್ಸೆ ಕುರಿತು ಪ್ರಾಮುಖ್ಯತೆಯ ವಿವಿಧ ವಿಷಯಗಳ ಕುರಿತು ತಜ್ಞರು ಚರ್ಚಿಸಿದರು.
ಮಕ್ಕಳಲ್ಲಿ ಪ್ರಚಲಿತದಲ್ಲಿರುವ ವಿವಿಧ ಕ್ಯಾನ್ಸರ್‌ಗಳ ಸಮಗ್ರ ಅವಲೋಕನವನ್ನು ಮಾಡಿದ ತಜ್ಞರು, ಆರಂಭಿಕ ತಪಾಸಣೆ, ರೋಗಲಕ್ಷಣಗಳು ಸೇರಿದಂತೆ ವಿವಿಧ ತಡೆಗಟ್ಟುವ ಕ್ರಮಗಳ ಮೇಲೆ ತಜ್ಞರು ಒತ್ತು ನೀಡಿದರು. ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಸಮುದಾಯದ ವ್ಯಾಪಕ ಭಾಗವಹಿಸುವಿಕೆಗಾಗಿ ಕರೆ ನೀಡಿದರು.
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಎಂ.ಎನ್.ರವಿ ಮಾತನಾಡಿ, ಬಾಲ್ಯದ ಕ್ಯಾನ್ಸರ್‌ಗಳು ಸಾಮಾನ್ಯವಲ್ಲ. ಇದು, ರಕ್ತದ ಕ್ಯಾನ್ಸರ್, ಮೆದುಳು ಮತ್ತು ಮೂತ್ರಪಿಂಡದ ಗೆಡ್ಡೆಗಳು ಮತ್ತು ಮೂಳೆ ಮತ್ತು ಕಣ್ಣಿನ ಕ್ಯಾನ್ಸರ್‌ಗಳನ್ನು ಒಳಗೊಂಡಿರುತ್ತದೆ. ಮಕ್ಕಳಲ್ಲಿ ಜ್ವರ ಮತ್ತು ತಲೆನೋವು, ಮೂಳೆ ನೋವು, ಆಲಸ್ಯ, ತೂಕ ನಷ್ಟ ಮತ್ತು ಪಲ್ಲರ್‌ನಂತಹ ಎಚ್ಚರಿಕೆಯ ಲಕ್ಷಣಗಳಾಗಿರುತ್ತವೆ, ಆರಂಭಿಕ ಹಂತದಲ್ಲಿಯೆ ಸರಿಯಾದ ರೋಗನಿರ್ಣಯವು ರೋಗವನ್ನು ಗುಣಪಡಿಸುವ ಕೀಲಿಯಾಗಿದೆ. ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನವು ನಾರಾಯಣ ಹೆಲ್ತ್ನಿಂದ ಅನುಮೋದಿಸಲ್ಪಟ್ಟ ಜಾಗತಿಕ ಅಭಿಯಾನವಾಗಿದ್ದು, ಕ್ಯಾನ್ಸರ್ ಹೊಂದಿರುವ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಜಾಗೃತಿ ಮೂಡಿಸಲು ಮತ್ತು ಬೆಂಬಲವನ್ನು ವಿಸ್ತರಿಸಿವುದು ಈ ಕಾರ್ಯಕಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೀಡಿಯಾಟ್ರಿಕ್ ಆಂಕೊಲಾಜಿ ತಜ್ಞ ಡಾ.ತರಂಗಿಣಿ ದುರುಗಪ್ಪ ಮಾತನಾಡಿ, ಕ್ಯಾನ್ಸರ್ ರೋಗನಿರ್ಣಯವು ಎಲ್ಲ ವಯಸ್ಸಿನವರಲ್ಲಿ ನಿರಾಸೆಯನ್ನು ಉಂಟುಮಾಡುತ್ತದೆ, ವಿಶೇಷವಾಗಿ ರೋಗಿಯು ಮಗುವಾಗಿದ್ದಾಗ. ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು ೧ ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ರೋಗನಿರ್ಣಯ ಮಾಡಲ್ಪಡುತ್ತವೆ ಮತ್ತು ಇವುಗಳಲ್ಲಿ ೩% ಮಕ್ಕಳಲ್ಲಿ ಕಂಡುಬರುತ್ತವೆ. ಅತ್ಯಂತ ಸಾಮಾನ್ಯವಾದ ಬಾಲ್ಯದ ಕ್ಯಾನ್ಸರ್ ಗಳೆಂದರೆ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್), ಬ್ರೆöÊನ್ ಟ್ಯೂಮರ್ ಮತ್ತು ಲಿಂಫೋಮಾವನ್ನು ಒಳಗೊಂಡಿರುತ್ತದೆ. ಬಹುಪಾಲು ಬಾಲ್ಯದ ಕ್ಯಾನ್ಸರ್ ಅನ್ನು ಮುಂಚಿನ ರೋಗನಿರ್ಣಯ ಮತ್ತು ಮೀಸಲಾದ ಪೀಡಿಟ್ರಿಕ್ ಹೆಮಟಾಲಜಿಯಲ್ಲಿ ನಿರ್ವಹಣೆಯೊಂದಿಗೆ ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾರುಕಟ್ಟೆಯ ಮುಖ್ಯಸ್ಥರಾದ ಕೆ.ವಿ. ಕಾಮತ್, ರೇಡಿಯೇಶನ್ ಆಂಕೊಲಾಜಿಸ್ಟ್ ಡಾ. ಮೇಖಳ, ಮಕ್ಕಳ ತಜ್ಞರಾದ ಡಾ.ಮನೀಶ್ ಎಸ್ ಗಿರೀಶ್ ಮತ್ತು ಡಾ.ಚೇತನ್ ಹಾಜರಿದ್ದರು.