ಮನೆ ದೇವಸ್ಥಾನ ಮಲೆ ಮಹದೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ: 2.50 ಕೋಟಿ ಕಾಣಿಕೆ ಸಂಗ್ರಹ

ಮಲೆ ಮಹದೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ: 2.50 ಕೋಟಿ ಕಾಣಿಕೆ ಸಂಗ್ರಹ

0

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 36 ದಿನಗಳ ಅವಧಿಯಲ್ಲಿ  2.50 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

122 ಗ್ರಾಂ ಚಿನ್ನ ಹಾಗೂ 2.710 ಕೆಜಿ ಬೆಳ್ಳಿ ಪದಾರ್ಥಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಹಾಕಿದ್ದಾರೆ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ರಾತ್ರಿವರೆಗೂ ‌ಹುಂಡಿ ಎಣಿಕೆ ಕಾರ್ಯ ನಡೆಯಿತು.

ನೋಟುಗಳ ರೂಪದಲ್ಲಿ ₹2,36,78,274 ಹಾಗೂ ನಾಣ್ಯಗಳ ರೂಪದಲ್ಲಿ ₹14,07,520 ಸೇರಿದಂತೆ ಒಟ್ಟು ₹2,50,85,794 ಸಂಗ್ರಹವಾಗಿದೆ.

ಈ ಹಿಂದೆ ಸೆ.28ರಂದು ಹುಂಡಿ ಹಣ ಎಣಿಕೆ ನಡೆದಿದ್ದು, 36 ದಿನಗಳ ಅವಧಿಯಲ್ಲಿ ಐದು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆದಿತ್ತು. ಲಕ್ಷಾಂತರ ಭಕ್ತರು ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು.