ಮನೆ ಸುದ್ದಿ ಜಾಲ ಮೈಸೂರು ದಸರಾ ವಸ್ತು ಪ್ರದರ್ಶನ: ಪ್ರತಿದಿನ 10 ಸಾವಿರ ಮಂದಿ ಭೇಟಿ

ಮೈಸೂರು ದಸರಾ ವಸ್ತು ಪ್ರದರ್ಶನ: ಪ್ರತಿದಿನ 10 ಸಾವಿರ ಮಂದಿ ಭೇಟಿ

0

ಮೈಸೂರು(Mysuru): ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ವತಿಯಿಂದ ದೊಡ್ಡಕೆರೆ ಮೈದಾನದ ಆವರಣದಲ್ಲಿ ಹಮ್ಮಿಕೊಂಡಿರುವ ದಸರಾ ವಸ್ತುಪ್ರದರ್ಶನಕ್ಕೆ ಸಾರ್ವಜನಿಕರು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 26 ರಂದು ವಸ್ತುಪ್ರದರ್ಶನ ಆರಂಭಗೊಂಡಿದ್ದು, ಡಿಸೆಂಬರ್ 24 ರವರೆಗೆ ನಡೆಯಲಿದೆ.

ಪ್ರತಿ ದಿನ ಸುಮಾರು 10,000 ಹಾಗೂ ವಾರದ ಕಡೆ ದಿನಗಳಲ್ಲಿ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ ಸುಮಾರು 15,000 ರಿಂದ 20,000 ಸಾರ್ವಜನಿಕರು ವಸ್ತುಪ್ರದರ್ಶನ ವೀಕ್ಷಿಸಲು ಭೇಟಿ ನೀಡುತ್ತಿರುತ್ತಾರೆ.

ಪ್ರಾಧಿಕಾರದಲ್ಲಿರುವ ಗಾನಕೋಗಿಲೆ ಪಿ.ಕಾಳಿಂಗರಾವ್ ರಂಗಮಂಟಪದಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಿದ್ಧ ಕಲಾವಿದರು, ಗಾಯಕರುಗಳಿಂದ ಪ್ರತಿದಿನ ಸಂಜೆ 7:00 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ಆಯೋಜಿಸಲಾಗುತ್ತಿದೆ. ವಸ್ತುಪ್ರದರ್ಶನ ಆವರಣದಲ್ಲಿ ಎಲ್ಲಾ ರೀತಿಯ ಜಾಹೀರಾತು ನೀಡಲು ಸಮಂಜಸವಾದ ದರದಲ್ಲಿ ಅವಕಾಶ ಇರುತ್ತದೆ. ಆಸಕ್ತ ಅರ್ಹ ಉದ್ದಿಮೆದಾರರು, ವ್ಯಾಪಾರಸ್ಥರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಜಾಹೀರಾತು ನೀಡಲು ಇಚ್ಛಿಸುವವರು ಪ್ರಾಧಿಕಾರದ ಕಚೇರಿಯ ಅಧೀಕ್ಷಕರಾದ ನಂದಕುಮಾರ್ ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 2446887, ಮೊಬೈಲ್ ಸಂಖ್ಯೆ: 7204202444 ಅನ್ನು ಸಂಪರ್ಕಿಸಿ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್‌ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.