ಮನೆ ಸುದ್ದಿ ಜಾಲ ಶಂಕರ್ ನಾಗ್ ಜನ್ಮದಿನವನ್ನು ಆಟೋ ಚಾಲಕರ ದಿನವೆಂದು ಘೋಷಿಸಲಿ: ಗುರುಪ್ರಸಾದ್

ಶಂಕರ್ ನಾಗ್ ಜನ್ಮದಿನವನ್ನು ಆಟೋ ಚಾಲಕರ ದಿನವೆಂದು ಘೋಷಿಸಲಿ: ಗುರುಪ್ರಸಾದ್

0

ಮೈಸೂರು(Mysuru): ಶಂಕರ್ ನಾಗ್ ಅವರ ಹುಟ್ಟುಹಬ್ಬದಂದು ಆಟೋ ಚಾಲಕರ ದಿನಾಚರಣೆ ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಸಮಾಜಸೇವಕ‌ ಎ.ಗುರುಪ್ರಸಾದ್ ಒತ್ತಾಯಿಸಿದರು.

ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ನಟ ನಿರ್ದೇಶಕ ಶಂಕರನಾಗ್ ರವರ ಹುಟ್ಟುಹಬ್ಬದ ಅಂಗವಾಗಿ ಬೋಗಾದಿ ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಕಿಡ್ಸ್ ಆಫ್ ಮೈಸೂರು ಶಾಲೆಯ ಮುಂಭಾಗದಲ್ಲಿ 60 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಂತರ ಮಾತನಾಡಿದ ಎ.ಗುರುಪ್ರಸಾದ್,  ಆಟೋ ಚಾಲಕರು ಸ್ವಾಭಿಮಾನಿಗಳು ಸಂಪಾದನೆಯ ಜೊತೆಯಲ್ಲಿ ಸಮಾಜದ ಒಳಿತಿಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಹೃದಯವಂತರು ಎಂದು ಹೇಳಿದರು.

ಕನ್ನಡ ಚಿತ್ರರಂಗದ ಬಹುಮುಖದ ಪ್ರತಿಭಾವಂತ ಕರಾಟೆ ಕಿಂಗ್ ಶಂಕರ್ ನಾಗ್ ಅವರು  ನಿರ್ದೇಶನ ಮತ್ತು ನಟನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ದೂರದೃಷ್ಟಿಯುಳ್ಳ ಕಲಾವಿದ. ಇವರ ನಿರ್ದೇಶನದ ಮಾಲ್ಗುಡಿ ಡೇಸ್ ವಿಶ್ವವಿಖ್ಯಾತಿ ಪಡೆದ ದಂತಕಥೆಯಾಗಿದೆ. ಸಾಧನೆಯೇ ಬದುಕಿನ ಗುರಿ ಎಂಬ ಶಂಕರನಾಗ್ ಅವರ ತತ್ವ ನಮ್ಮೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷ ಶ್ರೀನಿವಾಸ್, ಜೀವಧಾರ ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆ ಅಧ್ಯಕ್ಷ  ಎಚ್ ಎನ್ ಶ್ರೀಧರ್ ಮೂರ್ತಿ, ಅಶ್ವಿನ್ ಕೌಂಡಿನ್ಯ, ಆಟೋ ಚಾಲಕರ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್, ಸೋಮಶೇಖರ್, ಶ್ರೀನಿವಾಸ್, ಚೇತನ್, ಸಿದ್ದೇಗೌಡರು,ಚಂದು, ಮದನ್, ಮಲ್ಲಿಕಾರ್ಜುನ್ ಹಾಜರಿದ್ದರು