ಮನೆ ರಾಜ್ಯ ಮಹಾನ್ ವ್ಯಕ್ತಿತ್ವ ಹೊಂದಿದ ಶಂಕರ್ ನಾಗ್ ಎಂದೆಂದೂ ಅಮರ: ಎಲ್ ನಾಗೇಂದ್ರ

ಮಹಾನ್ ವ್ಯಕ್ತಿತ್ವ ಹೊಂದಿದ ಶಂಕರ್ ನಾಗ್ ಎಂದೆಂದೂ ಅಮರ: ಎಲ್ ನಾಗೇಂದ್ರ

0

ಮೈಸೂರು: ಕನ್ನಡ ಚಿತ್ರರಂಗದ ಮಹಾನ್ ವ್ಯಕ್ತಿತ್ವ ಹೊಂದಿದ ಶಂಕರ್ ನಾಗ್ ಎಂದೆಂದೂ ಅಮರ. ಅವರ ಸಾಮಾಜಿಕ ಮೌಲ್ಯಗಳು , ಚಿಂತನೆ ನಮ್ಮೆಲ್ಲರಿಗೂ ಸದಾ ಆದರ್ಶವಾಗಿದೆ ಶಾಸಕ ಎಲ್ ನಾಗೇಂದ್ರ ತಿಳಿಸಿದರು.

ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಮಂಡಿ ಮೊಹಲ್ಲಾ ನಾಗರಿಕ ವೇದಿಕೆ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಮುಂಭಾಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಚಲನಚಿತ್ರ ರಂಗದ ನಿರ್ದೇಶಕ , ನಟ, ನಿರ್ಮಾಪಕ, ಕಿರುತೆರೆ ಮೂಲಕ ಇಡೀ ಭಾರತದಲ್ಲಿ ಅಪಾರ ಕೀರ್ತಿಗಳಿಸಿದ ಶಂಕರ್ ನಾಗ್ ಅವರು ಶಂಕರ್ ನಾಗ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ. ಅವರ ದೂರ ದೃಷ್ಟಿ , ತಂತ್ರಜ್ಞಾನ, ಕನ್ನಡ ಚಿತ್ರರಂಗ ಎಂದು ಮರೆಯಲಾಗದು. ಅಭಿವೃದ್ಧಿ ದೃಷ್ಟಿಕೋನ ಕನ್ನಡ ಚಿತ್ರರಂಗದ ಬೆಳವಣಿಗೆ ಕೊಡುಗೆ ಅಪಾರ ಎಂದು ತಿಳಿಸಿದರು.

ಬೆಂಗಳೂರಿನ ಮೆಟ್ರೋ ಯೋಜನೆ, ಚಾಮುಂಡಿ ಬೆಟ್ಟಕ್ಕೆ ರೋಪ್’ವೇ ಕನಸು ಕಂಡಿದ್ದ ಶಂಕರ್ ನಾಗ್ ತಮ್ಮ ಚಲನಚಿತ್ರಗಳ ಮೂಲಕ ಸಮಾಜದ ಪರಿವರ್ತನೆಗೆ ವಿಶೇಷವಾಗಿ ಆಟೋ ಚಾಲಕರಿಗೆ ಮಹಾನ್ ಗೌರವವನ್ನು ತಂದು ಕೊಟ್ಟವರು. ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಹೇಳಿದರು

ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ,  ಶಂಕರ್ ನಾಗ್ ರವರು ಇತಿಹಾಸದಲ್ಲೇ ದೇಶ ಕಂಡ ಅಪರೂಪದ ಕಲಾವಿದ ಅವರು ರಂಗಕರ್ಮಿ ಆಗಿದ್ದರಿಂದ ಚಲನಚಿತ್ರದಲ್ಲಿ ನಟನೆ ಯು ಗಂಭೀರವಾಗಿ ಮೂಡಿ ಬರುತ್ತಿತ್ತು ಅವರ ಚಲನಚಿತ್ರಗಳಾದ ಒಂದಾನೊಂದು ಕಾಲದಲ್ಲಿ, ಮಿಂಚಿನ ಓಟ ,ಆಟೋರಾಜ ,ಮಾಲ್ಗುಡಿ ಡೇಸ್ , ಕರ್ನಾಟಕದ ಸಂಸ್ಕೃತಿ ಸಾಹಿತ್ಯ ಕಲೆಯನ್ನು ಚಿತ್ರದ ಮೂಲಕ ಅವರ ಮಾಲ್ಗುಡಿ ಡೇಸ್ ಚಲನಚಿತ್ರದ ಮೂಲಕ ವಿಶ್ವಕ್ಕೆ ಪರಿಚಯಿಸಿದ ಮಹಾನ್ ಕಲಾವಿದ ಎಂದರು.

ಶಂಕರ್ ನಾಗ್ ಹಾಗೆಯೇ ಅವರ ಶ್ರೀಮತಿ ಅರುಂಧತಿ  ನಾಗ್ ರವರು ಕರ್ನಾಟಕದಲ್ಲಿ ಶಂಕರ್ ನಾಗ್ ಅವರನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ರಂಗ ಶಾಲೆಯನ್ನು ತೆರೆದು ರಂಗಭೂಮಿಗೆ ನಿರಂತರವಾಗಿ ಸಹಾಯವಾಗಲು ಶಂಕರ್ ನಾಗ್ ರಂಗಮಂಟಪವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಅವರ ವಿಚಾರಧಾರೆಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಹಿರಿಯ ಆಟೋ ಚಾಲಕರಾದ ಬೆಲವತ್ತ ಗ್ರಾಮದ ಆರ್ ನಾಗರಾಜ್, ಕಬೀರ್ ರಸ್ತೆಯ ಜಿ ಮಲ್ಲಯ್ಯ, ಮಂಡಿ ಮೊಹಲ್ಲಾದ ಎನ್ ವೆಂಕಟೇಶ್, ಸುಬ್ರಹ್ಮಣ್ಯ, ವೀರನಗೆರೆಯ ಕೃಷ್ಣ , ಚಾಮರಾಜ ಮೊಹಲ್ಲಾದ ರವಿಕುಮಾರ್ ರವರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಂಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೇಬಲ್ ವಿಜಿ, ಸೂರಜ್, ಚಂದ್ರು, ಸದಾಶಿವ, ಪ್ರಮೋದ್, ಅರವಿಂದ್, ಹರೀಶ್, ಶಾಂತಿ, ರವಿಕುಮಾರ್, ಶಿವಾಜಿರಾವ್ ಹಾಗೂ ಇನ್ನಿತರರು ಹಾಜರಿದ್ದರು.