ಮನೆ ರಾಜ್ಯ ಟಿಪ್ಪು ಜಯಂತಿ: ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

ಟಿಪ್ಪು ಜಯಂತಿ: ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ

0

ಮೈಸೂರು(Mysuru):  ಇಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಹುಬ್ಬಳ್ಳಿಯ ಈದ್ಗಾ ಮೈದಾನ ಮತ್ತು ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ  ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಹಲವು ಷರತ್ತುಗಳನ್ನ ವಿಧಿಸಿ ಅನುಮತಿ ನೀಡಿದೆ.  20 ಅಡಿ ಉದ್ದ 30 ಅಡಿ ಅಗಲ  ಪೆಂಡಾಲ್ ಹಾಕಲು ಅವಕಾಶ.  ಟಿಪ್ಪು ಫೋಟೋ  ಬಿಟ್ಟು  ಬೇರೆ ಯಾರ ಫೋಟೊ ಹಾಕುವಂತಿಲ್ಲ. ಬೇರೆ ಯಾವುದೇ ಭಾವಚಿತ್ರ ಭಾವುಟ ಪ್ರದರ್ಶಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

ನಗರದ ಎನ್. ಆರ್ ಮೊಹಲ್ಲಾದ ಮಸೀದಿ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಎನ್ ಆರ್ ಮೊಹಲ್ಲಾದ ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್  ಮಾಡಲಾಗಿದೆ.