ಮನೆ ಅಂತಾರಾಷ್ಟ್ರೀಯ ಆಸ್ಟ್ರೇಲಿಯಾದ ಹಡಗಿನ 800 ಪ್ರಯಾಣಿಕರಿಗೆ ಕೋವಿಡ್

ಆಸ್ಟ್ರೇಲಿಯಾದ ಹಡಗಿನ 800 ಪ್ರಯಾಣಿಕರಿಗೆ ಕೋವಿಡ್

0

ಆಸ್ಟ್ರೇಲಿಯಾ:  ಸಿಡ್ನಿ ನಗರದ ಬಂದರಿನಲ್ಲಿ ನಿಲ್ಲಿಸಲಾಗಿರುವ ‘ಮೆಜೆಸ್ಟಿಕ್‌ ಪ್ರಿನ್ಸಸ್‌‘ ಹಡಗಿನಲ್ಲಿ 800 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ

ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್‌ ವೇಲ್ಸ್‌ ರಾಜಧಾನಿಯಾಗಿರುವ ಸಿಡ್ನಿ ನಗರದಲ್ಲಿ ಈ ಹಡಗು ಲಂಗರು ಹಾಕಿದ್ದು, ಕೋವಿಡ್‌ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಆಸ್ಟ್ರೇಲಿಯಾದ ಗೃಹ ಮಂತ್ರಾಲಯ ನಾಗರಿಕರಿಗೆ ಸೂಚನೆ ನೀಡಿದೆ.

ಹಡಗಿನಲ್ಲಿ ನೂರಾರು ಜನರಿಗೆ ಕೋವಿಡ್‌ ಪತ್ತೆಯಾಗಿ‌ದ್ದು, ಹೆಚ್ಚಿನ ಪ್ರ‌ಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಹೀಗೆ ಈ ಪ್ರಕರಣವನ್ನು ಆಸ್ಟ್ರೇಲಿಯಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಕ್ಲಾರ್‌ ಓ‘ನೀಲ್‌, ‘ಸ್ಥಳದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಮೆಜೆಸ್ಟಿಕ್‌ ಪ್ರಿನ್ಸನ್‌ನಿಂದ ಪ್ರಯಾಣಿಕರನ್ನು ಹೊರ ತರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ‘ ಎಂದು ಹೇಳಿದ್ದಾರೆ.