ಮನೆ ಕ್ರೀಡೆ ಐಪಿಎಲ್’ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್‌’ನ ಕ್ರಿಕೆಟಿಗ ಪೊಲಾರ್ಡ್

ಐಪಿಎಲ್’ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್‌’ನ ಕ್ರಿಕೆಟಿಗ ಪೊಲಾರ್ಡ್

0

ಮುಂಬೈ(Mumbai): ಇಂಡಿಯನ್ ಪ್ರೀಮಿಯರ್ ಲೀಗ್‌’ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‌’ನ ಖ್ಯಾತ ಕ್ರಿಕೆಟಿಗ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ.

ಇದರ ಬೆನ್ನಲ್ಲೇ, ಅವರನ್ನು ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ತಮ್ಮ ವಿದಾಯದ ಬಗ್ಗೆ ಪೊಲಾರ್ಡ್ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದು, ಇನ್ನಷ್ಟು ವರ್ಷ ಐಪಿಎಲ್‌’ನಲ್ಲಿ ಆಡಬೇಕೆಂದುಕೊಂಡಿದ್ದೆ. ಆದರೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜೊತೆ ಚರ್ಚಿಸಿದ ಬಳಿಕ ನಿವೃತ್ತಿಯ ನಿರ್ಧಾರ ಮಾಡಿದೆ. ಇದೊಂದು ಕಠಿಣ ನಿರ್ಧಾರವಾಗಿತ್ತು.

ಮುಂಬೈ ತಂಡದ ಪರ ಆಡಿರುವ ನನಗೆ ಐಪಿಎಲ್‌’ನ ಬೇರಾವ ತಂಡದ ಪರವಾಗಿ ಮುಂಬೈ ವಿರುದ್ಧ ಆಡಲು ಇಷ್ಟಲಿಲ್ಲ. ಒಮ್ಮೆ ಇಂಡಿಯನ್ಸ್ ಆಟಗಾರನಾದರೆ, ಯಾವಾಗಲೂ ಮುಂಬೈ ಇಂಡಿಯನ್ಸ್ ಆಟಗಾರನೆ ಎಂದು ಹೇಳಿಕೊಂಡಿದ್ದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಇದರ ಬೆನ್ನಲ್ಲೇ, ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಐದು ಬಾರಿ ಚಾಂಪಿಯನ್ ಆದ ತಂಡದ ಆಧಾರ ಸ್ತಂಭಗಳಲ್ಲಿ ಪೊಲಾರ್ಡ್ ಸಹ ಒಬ್ಬರು. ಐಪಿಎಲ್‌ಗೆ ಅವರು ವಿದಾಯ ಹೇಳಿದ್ದು, ಮುಂಬರುವ ಐಪಿಎಲ್ ಸರಣಿಯಲ್ಲಿ ಅವರು ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್ ಪರ 13 ಆವೃತ್ತಿಗಳಲ್ಲಿ ಆಡಿರುವ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಅವರು ಬ್ಯಾಟಿಂಗ್ ತರಬೇತುದಾರರಾಗಿ ಮುಂಬೈ ಇಂಡಿಯನ್ಸ್ ಕುಟುಂಬದಲ್ಲೇ ಮುಂದುವರಿಯಲಿದ್ದಾರೆ. ಈ ಪೀಳಿಗೆ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಅವರು, 2010ರಲ್ಲಿ ಮುಂಬೈ ತಂಡ ಸೇರಿದ್ದರು. 5 ಐಪಿಎಲ್ ಟ್ರೋಫಿ ಮತ್ತು 2 ಚಾಂಪಿಯನ್ಸ್ ಲೀಗ್ ಸರಣಿ ಗೆಲುವಿನಲ್ಲಿ ತಂಡದ ಜೊತೆಗಿದ್ದರು ಎಂದು ಅದು ಹೇಳಿದೆ.