Saval TV on YouTube
ಬ್ರಿಟನ್: ಜಿ20 ಸಮಾವೇಶದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭೇಟಿಯಾದ ಒಂದು ಗಂಟೆಯೊಳಗೆ ವಾರ್ಷಿಕ 3000 ಭಾರತೀಯ ವೀಸಾ ಅನುಮತಿಗೆ ಬ್ರಿಟನ್ ಒಪ್ಪಿಗೆ ನೀಡಿದೆ.
ಬ್ರಿಟನ್–ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆ ಬಲವರ್ಧನೆ ನಿಟ್ಟಿನಲ್ಲಿ ಭಾರತವು ವೀಸಾ ಯೋಜನೆಯ ಲಾಭ ಪಡೆಯುತ್ತಿರುವ ಮೊದಲ ರಾಷ್ಟ್ರವೆಂದು ಬ್ರಿಟನ್ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಉಭಯ ರಾಷ್ಟ್ರಗಳು ಹಿಂದಿನ ವರ್ಷ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.ಈ ಯೋಜನೆಯಡಿ ಭಾರತದ 3000 ಸಾವಿರ ಯುವಕರು ಪ್ರತಿ ವರ್ಷ ಯುಕೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ.
18–30 ವಯೋಮಿತಿಯ ಭಾರತೀಯ ಯುವಕರು ಜೀವನದಲ್ಲಿ ಒಮ್ಮೆ ಬ್ರಿಟನ್‌ನ ವೃತ್ತಿ ಹಾಗೂ ಸಾಂಸ್ಕೃತಿಕ ವಿನಿಮಯದ ಭಾಗವಾಗಲಿದ್ದಾರೆ. 2023ರ ಪ್ರಾರಂಭದಲ್ಲಿ ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ.
ಸುನಕ್ ಪ್ರಧಾನಿಯಾದ ಬಳಿಕ ಮೊದಲ ಸಲ ಇಂಡೋನೇಷ್ಯಾದ ಬಾಲಿಯಲ್ಲಿ ಮೋದಿ ಹಾಗೂ ಸುನಕ್ ಭೇಟಿಯಾಗಿದ್ದರು.