Saval TV on YouTube
ಬ್ಯಾಂಕಾಕ್: ಏಷ್ಯಾಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮಣಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ ಮಣಿಕಾ 6–11, 11–6, 11–5, 11–7, 8–11, 9–11, 11–9ರಿಂದ (4–3) ತನಗಿಂತ ಮೇಲಿನ ರ‍್ಯಾಂಕಿನ ಚೀನಾ ತೈಪೆ ಆಟಗಾರ್ತಿ ಚೆನ್ ಜು ಯು ಅವರನ್ನು ಪರಾಭವಗೊಳಿಸಿದರು.
ಭಾರತದ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿದ್ದರೆ, ಚೆನ್ 23ನೇ ಕ್ರಮಾಂಕದಲ್ಲಿದ್ದಾರೆ.ಇದಕ್ಕೂ ಮೊದಲು ಮಣಿಕಾ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ, ಚೀನಾದ ಚೆನ್ ಷಿಂಗ್‌ಟಾಂಗ್ ಅವರನ್ನು ಸೋಲಿಸಿದ್ದರು.
ಸೆಮಿಫೈನಲ್‌ನಲ್ಲಿ ಮಣಿಕಾ ಅವರು ಕೊರಿಯಾದ ಜಿಯೊನ್ ಜಿಹೀ ಮತ್ತು ಜಪಾನ್‌ನ ಮಿಮೊ ಇಟೊ ನಡುವಣ ಪಂದ್ಯದ ವಿಜೇತರನ್ನು ಎದುರಿಸುವರು.