ಮನೆ ರಾಜ್ಯ ಮೈಸೂರು: ಕಂದಾಯ ಸಚಿವ ಆರ್.ಅಶೋಕ್’ಗೆ ಸಾಂಪ್ರದಾಯಿಕ ಸ್ವಾಗತ

ಮೈಸೂರು: ಕಂದಾಯ ಸಚಿವ ಆರ್.ಅಶೋಕ್’ಗೆ ಸಾಂಪ್ರದಾಯಿಕ ಸ್ವಾಗತ

0

ಮೈಸೂರು(Mysuru) : ಎಚ್.ಡಿ.ಕೋಟೆ ತಾಲ್ಲೂಕಿನ ಕೆಂಚನಹಳ್ಳಿಯಲ್ಲಿ ವಾಸ್ತವ್ಯ ಹೂಡಲು, ಜನರ ಸಮಸ್ಯೆ ಆಲಿಸಲು‌ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಸ್ವಾಗತ ಕೋರಲಾಯಿತು.

ಶನಿವಾರ ಭೀಮನಕೊಲ್ಲಿಯಲ್ಲಿರುವ ತೋಟಗಾರಿಕೆ ಇಲಾಖೆಯ ತಾಳೆ ಬೆಳೆ ಉತ್ಕೃಷ್ಟ ಕೇಂದ್ರದ ಬಳಿ ಜಿಲ್ಲಾಡಳಿತದಿಂದ ಸಚಿವರಿಗೆ ಸ್ವಾಗತ ನೀಡಲಾಯಿತು.

ಜಿಲ್ಲಾಡಳಿತದಿಂದ ಭೀಮನಕೊಲ್ಲಿಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ವಿವಿಧ ಸವಲತ್ತು‌ ವಿತರಣೆ ಕಾರ್ಯಕ್ರಮದ ಸ್ಥಳಕ್ಕೆ ಅಲಂಕೃತ ಟ್ರ್ಯಾಕ್ಟರ್‌’ನಲ್ಲಿ ಸಚಿವರನ್ನು ಅಧಿಕಾರಿಗಳು ಕರೆತಂದರು.

ನಂದಿ ಧ್ವಜ, ಡೋಲು, ಆದಿವಾಸಿಗಳ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾತಂಡದವರು ಪಾಲ್ಗೊಂಡಿದ್ದರಿಂದ ಮೆರವಣಿಗೆಗೆ ಮೆರುಗು ಬಂದಿತು. ಅಲಂಕೃತ ಎತ್ತಿನಗಾಡಿಗಳು ಗಮನಸೆಳೆದವು.

ನಂತರ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಆವರಣದಲ್ಲಿ ವಿವಿಧ ಇಲಾಖೆಗಳಿಂದ ಹಾಕಿದ್ದ ಮಳಿಗೆಗಳನ್ನು ಉದ್ಘಾಟಿಸಿ ವೀಕ್ಷಿಸಿದರು.

ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಪ್ರಾದೇಶಿಕ ಆಯುಕ್ತ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.