ಮನೆ ರಾಜಕೀಯ ನಾವೆಲ್ಲರೂ ಹಿಂದೂ ಹುಲಿಗಳಾಗಿ, ಧರ್ಮ ಉಳಿಸಬೇಕು: ಸಚಿವ ಕೆಎಸ್ ಈಶ್ವರಪ್ಪ

ನಾವೆಲ್ಲರೂ ಹಿಂದೂ ಹುಲಿಗಳಾಗಿ, ಧರ್ಮ ಉಳಿಸಬೇಕು: ಸಚಿವ ಕೆಎಸ್ ಈಶ್ವರಪ್ಪ

0

ಶಿವಮೊಗ್ಗ: ನಾವೆಲ್ಲರೂ ಹಿಂದೂ ಹುಲಿಗಳಾಗಬೇಕು. ಆ ಮುಖಾಂತರ ಧರ್ಮ ಉಳಿಸಬೇಕು ಎಂದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ 17 ನೇ ವಾರ್ಡ್, ಗುತ್ಯಪ್ಪ ಕಾಲೋನಿಯ, ಪಂಪಾ ನಗರ ಹಾಗೂ ವಿಜಯನಗರದ ಪ್ರಮುಖ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಸ್ವಾತಂತ್ರ್ಯ ಬಂದಾಗಿನಿಂದ, ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಅಭಿವೃದ್ಧಿ ಕಾರ್ಯಗಳು ಕಡಿಮೆಯಾಗುಗಿದ್ದವು. ನಮಗೆ ಸ್ವಾತಂತ್ರ್ಯ ಯಾಕೆ ಬಂತು ಎಂದರೆ ಬ್ರಿಟೀಷರ ವಿರುದ್ಧ ಹೋರಾಡಿಯೋ, ಸೇತುವೆ-ರಸ್ತೆ ಮಾಡುವುದಕ್ಕೋ ಅಲ್ಲ.! ಸ್ವಾತಂತ್ರ್ಯ ಬಂದಿರೋದು ಈ ದೇಶದ ಸಂಸ್ಕೃತಿ ಉಳಿಸಲು ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಆಗ್ತಾ ಇದೆ. ಕಾಶಿ ವಿಶ್ವನಾಥನ ದೇಗುಲ ಕೂಡ ಆಗುತ್ತೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿ ಹಲವು ವರ್ಷಗಳಾಗಿವೆ. ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಕ್ ಹೆಣ್ಣುಮಕ್ಕಳಿಗೆ ಕಂಟಕವಾಗಿತ್ತು. ಅದನ್ನೂ ಕೂಡ ತೆರವು ಮಾಡಲಾಗಿದೆ. ಈ ತರಹ ದೇಶದಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುತ್ತಾ, ಹಿಂದುತ್ವ ಪ್ರತಿಪಾದನೆ ಮಾಡಲಾಗುತ್ತಿದೆ. ಒಂದು ಕಡೆ ಅಭಿವೃದ್ಧಿ, ಇನ್ನೊಂದೆಡೆ ಹಿಂದುತ್ವ, ನಾಯಕತ್ವ ಪಾಲನೆಯಾಗುತ್ತಿದೆ ಎಂದು ಹೇಳಿದರು.

ಪಕ್ಷದ ನೇತೃತ್ವ ಎಂದಾಕ್ಷಣ ಸುಲಭದ ಕೆಲಸವಲ್ಲ. ಉದಾಹರಣೆಗೆ ಇಡೀ ಶಿವಮೊಗ್ಗದ ಏಳು ಸ್ಥಾನಗಳಲ್ಲಿ ಆರು ಗೆದ್ದಿದ್ದೇವೆ. ಭದ್ರಾವತಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ..! ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲ್ಲಬೇಕು ಎಂದು ಅತೀ ಹೆಚ್ಚು ಮತಗಳನ್ನ ಹಾಕಿದ್ದು ನಮ್ಮ ಶಿವಮೊಗ್ಗ ಜಿಲ್ಲೆ. ಪ್ರಧಾನಿ ಮೋದಿ ಅವರ ಆಶಯದಂತೆ ಅಭಿವೃದ್ಧಿ ಜೊತೆ ಹಿಂದುತ್ವವನ್ನೂ ಪ್ರತೀ ವಾರ್ಡ್ ನಲ್ಲಿ ಬೆಳೆಸಬೇಕು ಎಂದು ಹೇಳಿದರು.