ಹೊಟ್ಟೆಯ ಕೊಬ್ಬು ಕೇವಲ ಪುರುಷರು ಮಾತ್ರವಲ್ಲದೆ, ಮಹಿಳೆಯರಲ್ಲೂ ಇಂದಿನ ದಿನಗಳಲ್ಲಿ ಕಂಡುಬರುವುದು. ಆಹಾರ, ಜೀವನಶೈಲಿ, ವ್ಯಾಯಾಮ ಮಾಡದೆ ಇರುವುದು ಇತ್ಯಾದಿಗಳು ಹೊಟ್ಟೆಯ ಬೊಜ್ಜು ಬೆಳೆಯಲು ಪ್ರಮುಖ ಕಾರಣವೆಂದು ಹೇಳಬಹುದು.
ಆಧುನಿಕ ಜಗತ್ತಿನಲ್ಲಿ ಸಿಗುವಂತಹ ಅಲ್ಪ ಸ್ವಲ್ಪ ಸಮಯವು ಮೊಬೈಲ್ ನಲ್ಲೇ ಕಳೆದುಹೋಗುವ ಕಾರಣ ದೇಹ ಹಾಗೂ ಆರೋಗ್ಯದ ಕಡೆಗೆ ಗಮನಹರಿಸಲು ಹೆಚ್ಚು ಸಮಯ ಸಿಗದು. ಈ ಲೇಖನದಲ್ಲಿ ಹೊಟ್ಟೆಯ ಕೊಬ್ಬು ಕರಗಿಸುವ ಕೆಲವು ಯೋಗಾಸನಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಆಗ ಖಂಡಿತವಾಗಿಯೂ ಬೊಜ್ಜು ಕರಗಿಸಬಹುದು.
ಹೊಟ್ಟೆಯಲ್ಲಿ ಬೊಜ್ಜು ಶೇಖರಣೆ ಆಗಲು ಕಾರಣವೇನು?
• ಕೆಟ್ಟ ಆಹಾರ ಕ್ರಮ, ವ್ಯಾಯಾಮದ ಕೊರತೆ ಮತ್ತು ಒತ್ತಡದಿಂದಾಗಿ ಹೊಟ್ಟೆಯಲ್ಲಿ ಕೊಬ್ಬು ಜಮೆ ಆಗುವುದು. ಅನುವಂಶೀಯತೆಯು ಇದಕ್ಕೆ ಕಾರಣವಾಗಿರಬಹುದು.
• ಅನುವಂಶೀಯತೆಯಿಂದಾಗಿ ಮಧುಮೇಹ ಅಥವಾ ಬೊಜ್ಜು ಬರುವುದು ಹೆಚ್ಚು. ಇದೆಲ್ಲವನ್ನು ಆರೋಗ್ಯಕಾರಿ ಜೀವನಶೈಲಿಯಿಂದ ದೂರವಿಡಬಹುದು. ಆದರೆ ಅನಾರೋಗ್ಯಕಾರಿ ಆಹಾರ ಸೇವನೆ, ಅನಿಯಮಿತ ನಿದ್ದೆ ಮತ್ತು ಜಡ ಜೀವನಶೈಲಿಯಿಂದಾಗಿ ಹೊಟ್ಟೆಯಲ್ಲಿ ಬೊಜ್ಜು ಬೆಳೆಯುವುದು.
• ಇದು ಅನಾರೋಗ್ಯಕಾರಿ ಮಾತ್ರವಲ್ಲದೆ, ಇದರಿಂದ ದೇಹದ ಸೌಂದರ್ಯವು ಕೆಡುವುದು. ಈ ಹೆಚ್ಚುವರಿ ತೂಕದಿಂದಾಗಿ ತುಂಬಾ ಜಡ ಹಾಗೂ ಉದಾಸೀನತೆಯು ಬರುವುದು. ಹೊಟ್ಟೆಯ ಬೊಜ್ಜು ಇದ್ದರೆ ಅದರಿಂದ ಮಧುಮೇಹ, ಹೃದಯದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯು ಬರುವುದು.
• ಪೋಷಕಾಂಶಗಳ ಸೇವನೆ ಮತ್ತು ಸರಿಯಾದ ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ಹೋದರೆ ಇದನ್ನು ಕಡಿಮೆ ಮಾಡಬಹುದು. ಯೋಗವು ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ತುಂಬಾ ಸಹಕಾರಿ. ಅದು ಹೇಗೆ ಎಂದು ತಿಳಿಯಿರಿ.
ಕಪಾಲಭಾತಿ
ಯೋಗದಲ್ಲಿ ಹಲವಾರು ಯೋಗಾಸನಗಳಿದ್ದು, ಅದಲ್ಲಿ ಕಪಾಲಭಾತಿಯು ಒಂದು. ಸಂಸ್ಕೃತದಲ್ಲಿ ಕಪಾಲ ಎಂದರೆ ತಲೆಬುರುಡೆ ಮತ್ತು ಭಾತಿ ಎಂದರೆ ಕಾಂತಿ ಎಂದರ್ಥ. ಕಪಾಲಭಾತಿ ಪ್ರಾಣಾಯಾ ಮವನ್ನು ತಲೆಬುರುಡೆಗೆ ಕಾಂತಿ ನೀಡುವ ತಂತ್ರವೆಂದು ಹೇಳಲಾಗುತ್ತದೆ.
ಈ ಯೋಗಾಸನ ಮಾಡುವ ವಿಧಾನ
ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ.
ಬೆನ್ನು ನೇರವಾಗಿಸಿ ಮತ್ತು ಕಣ್ಣುಗಳನ್ನು ಮುಚ್ಚಿ.
ಮೊಣಕಾಲಿನಲ್ಲಿ ಅಂಗೈಗಳನ್ನು ಮೇಲ್ಮುಖವಾಗಿ ಇಡಿ.
ಸಾಮಾನ್ಯವಾಗಿ ಉಸಿರಾಡಿ ಮತ್ತು ಉಸಿರನ್ನು ಹೊರಗೆ ಬಿಡುವ ವೇಳೆ ತುಂಬಾ ಲಯಬದ್ಧವಾಗಿ ಇದನ್ನು ಮಾಡಿ.
ಹೊಟ್ಟೆಯನ್ನು ಬಳಸಿಕೊಂಡು ಗಾಳಿಯನ್ನು ಒತ್ತಾಯಪೂರ್ವಕವಾಗಿ ಹೊರಗೆ ಹಾಕಬಹುದು.
ಹೊಟ್ಟೆಯನ್ನು ಎಳೆದುಕೊಂಡಾಗ ಉಸಿರಾಟವು ಸರಿಯಾಗಿ ಆಗಬೇಕು.
ಲಾಭಗಳು
ಇದು ಜೀರ್ಣಕ್ರಿಯೆ ವ್ಯವಸ್ಥೆ, ಹೊಟ್ಟೆಯ ಸ್ನಾಯುಗಳನ್ನು ಉತ್ತೇಜಿಸುವುದು ಮತ್ತು ಬಲ ನೀಡುವುದು.
ಇದು ಮೂಗಿನ ಮಾರ್ಗವನ್ನು ಬಲಪಡಿಸುವುದು ಮತ್ತು ಎದೆಯಲ್ಲಿರುವ ತಡೆ ನಿವಾರಿಸುವುದು.
ರಕ್ತ ಸಂಚಾರವನ್ನು ಇದು ಸುಗಮಗೊಳಿಸುವುದು.
ಚರ್ಮದ ಕಾಂತಿ ವೃದ್ಧಿಸಿ, ಮುಖವು ಹೊಳೆಯುವಂತೆ ಮಾಡುವುದು.
ನೆನೆಪಿನ ಶಕ್ತಿ ಹೆಚ್ಚಿಸುವುದು.
ಮಾನಸಿಕ ಸ್ಪಷ್ಟತೆ ಮತ್ತು ಒತ್ತಡ, ಖಿನ್ನತೆ ದೂರ ಮಾಡುವುದು.
ದೇಹದಲ್ಲಿನ ಹೆಚ್ಚುವರಿ ಕೊಬ್ಬು ತೆಗೆಯುವುದು.
ನೌಕಾಸನ
ಮಾಡುವ ವಿಧಾನ
• ಬೆನ್ನಿನ ಮೇಲೆ ಮಲಗಿ
• ದೇಹದ ಮೇಲಿನ ಮತ್ತು ಕೆಳಗಿನ ಭಾಗವನ್ನು ಹಾಗೆ ಮೇಲೆತ್ತಿಕೊಂಡು ಮೂಳೆಗಳಲ್ಲಿ ಸಮತೋಲನ ತನ್ನಿ.
• ಕಾಲಿನ ಬೆರಳುಗಳು ಕಣ್ಣಿಗೆ ಸಮಾನವಾಗಿರಬೇಕು.
• ಮೊಣಕಾಲು ಮತ್ತು ಬೆನ್ನು ನೇರವಾಗಿ ಇರಲಿ.
• ಕೈಗಳು ನೆಲಕ್ಕೆ ಸಮಾನಾಂತರವಾಗಿ ಇರಲಿ.
• ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ.
• ಬೆನ್ನನ್ನು ನೇರವಾಗಿಸಿ.
• ಸಾಮಾನ್ಯವಾಗಿ ಉಸಿರಾಡಿ.
ಲಾಭಗಳು
• ಇದು ಸೊಂಟ, ಹೊಟ್ಟೆ ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುವುದು
• ಇದು ಜೀರ್ಣಕ್ರಿಯೆ ಕಾರ್ಯವನ್ನು ಸುಧಾರಿಸುವುದು
• ಮಣಿಗಟ್ಟನ್ನು ಬಲಪಡಿಸುವುದು ಮತ್ತು ತೂಕ ಇಳಿಕೆಗೆ ಸಹಕಾರಿ
• ಜಠರಕರುಳಿನ ಸಮಸ್ಯೆ ನಿವಾರಿಸುವುದು
• ನಿಶ್ಯಕ್ತಿ ದೂರ ಮಾಡುವುದು
• ಹೊಟ್ಟೆಯ ಸ್ನಾಯುಗಳನ್ನು ಕಟ್ಟುವುದು
• ಇದು ನರ ಮತ್ತು ಹಾರ್ಮೋನ್ ವ್ಯವಸ್ಥೆಯನ್ನು ಉತ್ತೇಜಿಸುವುದು
• ದೇಹವನ್ನು ನೆಲದಿಂದ ಮೇಲಕ್ಕೆತ್ತುವ ವೇಳೆ ಹಾಗೆ ಸಾಮಾನ್ಯವಾಗಿ ಉಸಿರನ್ನು ತೆಗೆದುಕೊಳ್ಳಿ ಮತ್ತು ಹೊರಗೆ ಬಿಡಿ.
ವಸಿಷ್ಠಾಸನ
ಮಾಡುವ ವಿಧಾನ
• ಸಂತೋಲಾಸನದಲ್ಲಿ ಇರಬೇಕು.
• ಎಡದ ಅಂಗೈಯು ನೆಲದ ಮೇಲಿರಲಿ ಮತ್ತು ನೆಲದಿಂದ ಬಲದ ಕೈಯನ್ನು ತೆಗೆಯಿರಿ.
• ಬಲದ ಬದಿಗೆ ಸಂಪೂರ್ಣ ದೇಹವನ್ನು ತಿರುಗಿಸಿ ಮತ್ತು ನೆಲದಿಂದ ಬಲದ ಕಾಲನ್ನು ಮೇಲಕ್ಕೆತ್ತಿ ಮತ್ತು ಇದನ್ನು ಎಡದ ಕಾಲಿನಲ್ಲಿ ಇಡಿ.
• ಬಲದ ಕೈಯನ್ನು ಮೇಲಕ್ಕೆತ್ತಿ ಮತ್ತು ಬೆರಳುಗಳು ಆಗಸದತ್ತ ನೋಡುತ್ತಲಿರಲಿ.
• ಮೊಣಕಾಲುಗಳು, ಪಾದ ಮತ್ತು ಹಿಂಗಾಲುಗಳು ಪರಸ್ಪರ ಜತೆಗಿರಲಿ.
• ಎರಡೂ ಕೈಗಳು ಮತ್ತು ಭುಜಗಳು ನೇರವಾಗಿ ಇರಲಿ.
• ತಲೆಯನ್ನು ತಿರುಗಿಸಿ ಮತ್ತು ಬಲದ ಕೈ ನೋಡಿ.
• ಹೀಗೆ ಸ್ವಲ್ಪ ಸಮಯ ಇರಬೇಕು.
• ಇದೇ ರೀತಿ ಎಡದ ಬದಿಗೂ ಮಾಡಿ.
ಲಾಭಗಳು
• ಹೆಚ್ಚು ಸಮಯ ನೀವು ಈ ಆಸನವನ್ನು ಹಿಡಿದಿಟ್ಟುಕೊಂಡರೆ ಆಗ ಇದರಿಂದ ಕೈಗಳು ಮತ್ತು ದೇಹಕ್ಕೆ ಬಲ ಸಿಗುವುದು
• ಸೊಂಟದ ಸುತ್ತಲಿನ ಕೊಬ್ಬು ಕರಗಿಸುವುದು
• ಇದು ದೇಹದಲ್ಲಿ ಸಮತೋಲನ ಕಾಪಾಡುವುದು
• ಏಕಾಗ್ರತೆ ಹೆಚ್ಚಿಸುವುದು
• ಮೊಣಕೈ ಮತ್ತು ಭುಜಗಳನ್ನು ಬಲಪಡಿಸುವುದು
• ಉಸಿರಾಡುವ ವಿಧಾ
• ನೆಲದಿಂದ ದೇಹವನ್ನು ಮೇಲಕ್ಕೆತ್ತುತ್ತಿರುವಂತೆ ನೀವು ಉಸಿರಾಡಿ. ಸಾಮಾನ್ಯವಾಗಿ ಉಸಿರಾಡುತ್ತಾ ದೇಹವನ್ನು ಹಾಗೆ ಹಿಡಿದಿಟ್ಟುಕೊಳ್ಳಿ.
ಸಂತೋಲಾಸನ
ಮಾಡುವ ವಿಧಾನ
• ಹೊಟ್ಟೆಯಲ್ಲಿ ಮಲಗಿ
• ಭುಜಕ್ಕೆ ನೇರವಾಗಿ ಅಂಗೈಯನ್ನು ನೆಲದ ಮೇಲೆ ಇಡಿ ಮತ್ತು ದೇಹದ ಮೇಲಿನ ಬಾಗವನ್ನು ಮೇಲಕ್ಕೆತ್ತಿ.
• ಕಾಲಿನ ಬೆರಳುಗಳನ್ನು ನೆಲಕ್ಕೆ ಊರಿಕೊಂಡು ದೇಹ ಮೇಲೆತ್ತಿ ಮತ್ತು ಮೊಣಕಾಲುಗಳು ನೇರವಾಗಿ ಇರಲಿ.
• ಮೊಣಕಾಲು, ಶ್ರೋಣಿ ಮತ್ತು ಬೆನ್ನಿನ ಹುರಿಯು ಸಮಾನವಾಗಿರಲಿ.
• ಮೊಣಕೈಯ ಭುಜದ ಕೆಳಗಡೆ ಇರುವಂತೆ ನೋಡಿಕೊಳ್ಳಿ.
• ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಬೇಕು.
ಲಾಭಗಳು
• ಇದು ತೊಡೆ, ಕೈಗಳು ಮತ್ತು ಭುಜಗಳನ್ನು ಬಲಪಡಿಸುವುದು
• ಬೆನ್ನುಹಿರಿ ಮತ್ತು ಹೊಟ್ಟೆಯ ಸ್ನಾಯುಗಳಿಗೆ ಬಲ ನೀಡುವುದು
• ಸಂಪೂರ್ಣ ಸ್ನಾಯುಗಳಿಗೆ ಬಲ ನೀಡುವುದು
• ನರ ವ್ಯವಸ್ಥೆಯಲ್ಲಿ ಇದು ಸಮತೋಲನ ವೃದ್ಧಿಸುವುದು
• ಮಣಿಪುರ ಚಕ್ರವನ್ನು ಉತ್ತೇಜಿಸುವುದು
• ಸಂಪೂರ್ಣ ದೇಹಕ್ಕೆ ಶಕ್ತಿ ನೀಡುವುದು ಮತ್ತು ಧನಾತ್ಮಕತೆ ಉಂಟು ಮಾಡುವುದು
• ದೇಹದೊಳಗೆ ಸಂತುಲನ ಮತ್ತು ಶಾಂತತೆ ಉಂಟು ಮಾಡುವುದು
• ನೆಲದಿಂದ ದೇಹವನ್ನು ಮೇಲಕ್ಕೆತ್ತುವ ವೇಳೆ ಉಸಿರಾಡಿ, ಇದೇ ಭಂಗಿಯಲ್ಲಿ ಇದ್ದರೆ ಆಗ ನೀವು ಸಾಮಾನ್ಯವಾಗಿ ಉಸಿರಾಡಿ
• ಈ ಯೋಗಾಸನಗಳ ಜತೆಗೆ ಸಂಸ್ಕರಿಸಿದ ಸಕ್ಕರೆ ಭರಿತ ಆಹಾರ ಮತ್ತು ಪಾನೀಯಗಳನ್ನು ದೂರವಿಡಬೇಕು. ನಿಮಗೆ ತಿನ್ನುವ ಬಯಕೆ ಆದ ವೇಳೆ ಹಣ್ಣುಗಳನ್ನು ತಿನ್ನಿ.