ಮನೆ ರಾಜ್ಯ ಮಂಗಳೂರು ಸ್ಫೋಟ ಪ್ರಕರಣ: ಸ್ಯಾಟ್ ಲೈಟ್ ಫೋನ್ ಬಳಕೆಯಾಗಿಲ್ಲ- ಎಸ್ ಪಿ ಸ್ಪಷ್ಟನೆ

ಮಂಗಳೂರು ಸ್ಫೋಟ ಪ್ರಕರಣ: ಸ್ಯಾಟ್ ಲೈಟ್ ಫೋನ್ ಬಳಕೆಯಾಗಿಲ್ಲ- ಎಸ್ ಪಿ ಸ್ಪಷ್ಟನೆ

0

ಮಂಗಳೂರು(Mangalore): ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ ಎಂಬ ವಿಚಾರವಾಗಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ದೃಢಪಟ್ಟಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಋುಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕಾಡಿನ ಕಡೆಯಿಂದ ಕೇಳಿ ಬಂದಿರುವ ಸ್ಫೋಟದ ಸದ್ದು ಇಲ್ಲಿ ಮಾಮೂಲು.  ಕಾಡಾನೆಗಳನ್ನು ಓಡಿಸಲು ಸಿಡಿಸಿರುವ ಸ್ಪೋಟಕಗಳದ್ದು ಎಂದು ತಿಳಿಸಿದ್ದಾರೆ.

ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ದಿನ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ರಕ್ಷಿತಾರಣ್ಯದಲ್ಲಿ ಸಾಟಲೈಟ್ ಫೋನ್ ಬಳಕೆಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಅದೇ ದಿನ ರಾತ್ರಿ ಕಾಡಿನ ಭಾಗದಿಂದ ಸ್ಫೋಟದ ಸದ್ದು ಕೇಳಿಬಂದಿದೆ ಎಂಬ ವಿಚಾರ ಕೇವಲ ವದಂತಿ ಎಂದು ಹೇಳಿದ್ದಾರೆ.

ಬೆಂದ್ರಾಳ ಪ್ರಾಂತ್ಯಕ್ಕೆ ಶುಕ್ರವಾರವೇ ಭೇಟಿ ನೀಡಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿತ್ತು. ಅದೇ ತಂಡ, ಈಗ ಆ ಪ್ರಾಂತ್ಯದಲ್ಲಿ ಮತ್ತಷ್ಟು ತಪಾಸಣೆಗೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ. ಅದರಂತೆ ಧರ್ಮಸ್ಥಳ ಪೊಲೀಸರು ಸುಮಾರು 5 ಕಿ.ಮೀ. ರಕ್ಷಿತಾರಣ್ಯದೊಳಗೆ ಪರಿಶೀಲನೆ ನಡೆಸಿದ್ದು ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದೂ ಹೇಳಲಾಗಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಅವರ ಅಧ್ಯಕ್ಷತೆಯಲ್ಲಿ ಕದ್ರಿ ಮಂಜುನಾಥ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಭೆ ನಡೆದಿದ್ದು, ಸಿಂಗಲ್ ಎಂಟ್ರಿ, ಸ್ಕ್ರೀನಿಂಗ್ ಮಷಿನ್, ಪಾರ್ಕಿಂಗ್ ಭದ್ರತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು.