ಮನೆ ರಾಷ್ಟ್ರೀಯ ಕರ್ನಾಟಕ ಸೇರ ಬಯಸಿದ ಮಹಾರಾಷ್ಟ್ರದ 40 ಗ್ರಾಮಗಳು

ಕರ್ನಾಟಕ ಸೇರ ಬಯಸಿದ ಮಹಾರಾಷ್ಟ್ರದ 40 ಗ್ರಾಮಗಳು

0

ಅಕ್ಕಲಕೋಟ: ಕರ್ನಾಟಕ ಜನರ ಬಗ್ಗೆ ಚಿಂತೆ ಮಾಡೋದು ಬಿಡಿ ಮೊದಲು ಮಹಾರಾಷ್ಟ್ರದಲ್ಲಿರುವ ನಮ್ಮ ಬಗ್ಗೆ ಚಿಂತೆ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಚಾಟಿ ಏಟು ನೀಡಿರುವ ಅಕ್ಕಲಕೋಟ ತಾಲ್ಳೂಕಿನ 40 ಗ್ರಾಮಗಳು ಕರ್ನಾಟಕ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಸುಮಾರು 40 ಗ್ರಾಮಗಳ ಗ್ರಾಮಸ್ಥರು ಕರ್ನಾಟಕಕ್ಕೆ ಸೇರುವ ಉತ್ಸಾಹ ತೋರಿಸಿ ತಾವೇ ಹೋರಾಟಕ್ಕೆ ಇಳಿದಿದ್ದಾರೆ.

ಮಹಾರಾಷ್ಟ್ರದಲ್ಲಿರುವ ನಮ್ಮ ಸಮಸ್ಯೆ ಬಗ್ಗೆ ಚಿಂತೆ ಮಾಡೋದು ಬಿಟ್ಟು ಬೆಳಗಾವಿ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ನಾವು ಅಭಿವೃದ್ದಿಯಲ್ಲಿ ತುಂಬಾನೇ ಹಿಂದುಳಿದಿದ್ದೇವೆ. ನಮಗೆ ಇಲ್ಲಿನ ಸರ್ಕಾರ ಯಾವುದೇ ಅಗತ್ಯ ಮೂಲ ಸೌಲಭ್ಯ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿಗೂ ಸರಿಯಾದ ರಸ್ತೆಗಳಿಲ್ಲ, ಜಮೀನುಗಳಿಗೆ ಉಚಿತ ವಿದ್ಯುತ್ ನೀಡುತ್ತಿಲ್ಲ. ಇಂತಹ ಹತ್ತಾರು ಸಮಸ್ಯೆಗಳಿವೆ. ನಮ್ಮನ್ನ ಕರ್ನಾಟಕಕ್ಕೆ ಬಿಟ್ಟುಕೊಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಜನರು ಆಗ್ರಹಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ‌.