ಮನೆ ರಾಜಕೀಯ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ ಶಾಸಕ ಜಿ.ಟಿ.ದೇವೇಗೌಡರ ವಿರೋಧಿ ಬಣ

ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ ಶಾಸಕ ಜಿ.ಟಿ.ದೇವೇಗೌಡರ ವಿರೋಧಿ ಬಣ

0

ಮೈಸೂರು: ಜೆಡಿಎಸ್ ಪಕ್ಷದಿಂದ ದೂರ ಉಳಿದು ನಂತರ ಪಕ್ಷದಲ್ಲೇ ಉಳಿಯುವುದಾಗಿ ತೀರ್ಮಾನ ತೆಗೆದುಕೊಂಡ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಅವರ ವಿರೋಧಿ ಬಣ ಇದೀಗ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದೆ.

ಮೈಸೂರಿನಲ್ಲಿ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲಿನಿಂದ ಶಾಸಕ ಜಿ.ಟಿ.ದೇವೇಗೌಡರ ವಿರೋಧಿ ಬಣ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದೆ.  ಕಾರ್ಯಕರ್ತರನ್ನು ಕುರಿತು ಸಭೆಯಲ್ಲಿ ಮಾತನಾಡಿದ ಮಾವಿನಹಳ್ಳಿ‌ ಸಿದ್ದೇಗೌಡ,  ನಾವು ಜೆಡಿಎಸ್ ಪಕ್ಷದಲ್ಲಿ ಇರಬೇಕಾ ಬೇಡ್ವಾ? ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದರು. ಈ ವೇಳೆ ರಾಜೀನಾಮೆ ಕೊಡಿ  ಎಂದು ಕಾರ್ಯಕರ್ತರು ಘೋಷಿಸಿದರು.

ನಿಮ್ಮ ಆಣತಿಯಂತೆ ರಾಜೀನಾಮೆ ನೀಡ್ತೇವೆ. ಮುಂದಿನ ನಮ್ಮ ರಾಜಕೀಯ ನಿರ್ಧಾರದ ಬಗ್ಗೆ ಮತ್ತೆ ಸ್ವಾಭಿಮಾನಿ ಸಮಾವೇಶ ಮಾಡ್ತೇವೆ . ನಿಮ್ಮ ತೀರ್ಮಾನದಂತೆ  ನಡೆಯುತ್ತೇವೆ ಎಂದು  ಮಾವಿನಹಳ್ಳಿ‌ ಸಿದ್ದೇಗೌಡ ಹೇಳಿದರು.

ರಮ್ಮನಹಳ್ಳಿಯಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ನಮ್ಮ ಸಂಪೂರ್ಣ ಟೀಂ ಭಾಗವಹಿಸುತ್ತಿದೆ . ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಯಾವ ಮನವೊಲಿಕೆಗೂ ಬಗ್ಗುವ ಪ್ರಶ್ನೆ ಇಲ್ಲ. ಆ ಹಂತ ದಾಟಿ ಇಂದು ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೆವೆ ಎಂದು ಮಾಹಿತಿ ನೀಡಿದರು.

ಈ ಸಭೆ ಬಗ್ಗೆ  ನಾವು ಈ ರೀತಿಯ ನಿರೀಕ್ಷೆ ಮಾಡಿರಲಿಲ್ಲ. ಜೆಡಿಎಸ್ ಕಾರ್ಯಕರ್ತರನ್ನು ಮಾತ್ರ ಈ ಸಭೆಗೆ ಕರೆದಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದಕ್ಕೆ ಅಸಹ್ಯ ಅನಿಸುತ್ತೆ. ಸಿದ್ದರಾಮಯ್ಯ ಅವರನ್ನು ಸೋಲಿಸಿ ತಪ್ಪು ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ. ದೊಡ್ಡ ದೇವೇಗೌಡರಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಅವರನ್ನು ಮನೆ ಕರೆಸಿ ಮೊಸಳೆ ಕಣ್ಣೀರು ಹಾಕ್ತೀರಿ. ನಿಮ್ಮ ಸ್ವಾರ್ಥಕ್ಕೆ‌ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಬಲಿ ಕೊಡುತ್ತಿದ್ದೀರಾ ? ಎಂದು ಮಾವಿನಹಳ್ಳಿ ಸಿದ್ದೇಗೌಡ  ಗುಡುಗಿದರು.