Saval TV on YouTube
ಮಧ್ಯಪ್ರದೇಶ: ಭೋಪಾಲ್’ನ ಮಂಡ್ಲಾ ಮತ್ತು ಬಾಲಘಾಟ್ ಜಿಲ್ಲೆಗಳಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್’ಕೌಂಟರ್’ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.
ಮಂಡ್ಲಾ ಮತ್ತು ಬಾಲಘಾಟ್ ಜಿಲ್ಲೆಯ ಭದ್ರತಾ ಪಡೆಗಳು ಮತ್ತು ಪೊಲೀಸರು ಬುಧವಾರ ನಕ್ಸಲರ ವಿರುದ್ಧ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಭೋಪಾಲ್‌ನಿಂದ ಸುಮಾರು 450 ಕಿ.ಮೀ ದೂರದಲ್ಲಿರುವ ಬಾಲಘಾಟ್ ಜಿಲ್ಲೆಯ ಗರ್ಹಿ ಪ್ರದೇಶ ಮತ್ತು ಮಂಡ್ಲಾ ಜಿಲ್ಲೆಯ ಮೋತಿನಾಳದ ಸುಪ್ಖಾರ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಲಾಗಿದೆ ಎಂದು ಮಂಡ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್’ಪಿ), ಗಜೇಂದ್ರ ಸಿಂಗ್ ತಿಳಿಸಿದ್ದಾರೆ.
ಎನ್’ಕೌಂಟರ್’ನಲ್ಲಿ ಇಬ್ಬರು ನಕ್ಸಲರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಗಜೇಂದ್ರ ಸಿಂಗ್ ಹೇಳಿದ್ದಾರೆ.
ಮೃತ ನಕ್ಸಲರು ಕನ್ಹಾ ಭೋರಮ್‌ದೇವ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅವರ ಚಲನವಲನಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗಿತ್ತು ಪೊಲೀಸರು ತಿಳಿಸಿದ್ದಾರೆ.














