ಮನೆ ಕಾನೂನು ಸಂಚಾರ ನಿಯಮ ಉಲ್ಲಂಘನೆ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ ವಸೂಲಿ

ಸಂಚಾರ ನಿಯಮ ಉಲ್ಲಂಘನೆ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ ವಸೂಲಿ

0

ಮೈಸೂರು(Mysuru):  ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ನಗರದಲ್ಲಿ ಒಂದೇ ದಿನದಲ್ಲಿ 3.43 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ನಗರದಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಾದ ಜಾರಿ ಸಂಬಂಧ ಕಳೆದ ಮೂರು ದಿನಗಳಿಂದ ನಗರ ಪೋಲಿಸ್ ಆಯುಕ್ತರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ.  ಸಂಚಾರಿ, ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಂದ  ಜಂಟಿ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಮೂರನೇ ದಿನ 3.43,000 ರೂ ದಂಡ ವಸೂಲಿ ಮಾಡಿರುವ ಬಗ್ಗೆ ವರದಿಯಾಗಿದೆ.

2647 ವಾಹನಗಳ ತಪಾಸಣೆ ಮಾಡಲಾಗಿದ್ದು, 695 ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ 41 ವಾಹನಗಳ ಜಪ್ತಿ ಮಾಡಲಾಗಿದೆ.  ನಿನ್ನೆ ಕೂಡ 3.22,200 ರೂ ದಂಡ ವಸೂಲಿ ಮಾಡಲಾಗಿತ್ತು. ಮಂಟಿ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆ ಸೇರಿದಂತೆ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ  ನಡೆಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ, ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ಹಾಗೂ ವಿಭಾಗದ ಎಲ್ಲಾ ಎ.ಸಿ.ಪಿ.ರವರು, ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‍ ಪೆಕ್ಟರ್ ಹಾಗೂ ಸಿಬ್ಬಂದಿಗಳು  ಭಾಗವಹಿಸಿದ್ದರು.