ಮನೆ ಕಾನೂನು 24 ಗಂಟೆಯೊಳಗೆ ಅಪಘಾತ ಪ್ರಕರಣದ ವಾಹನ ಹಿಂತಿರುಗಿಸಲಾಗುವುದು: ಡಾ.ಎಂ.ಎ.ಸಲೀಂ

24 ಗಂಟೆಯೊಳಗೆ ಅಪಘಾತ ಪ್ರಕರಣದ ವಾಹನ ಹಿಂತಿರುಗಿಸಲಾಗುವುದು: ಡಾ.ಎಂ.ಎ.ಸಲೀಂ

0

ಬೆಂಗಳೂರು(Bengaluru): ಇನ್ನು ಮುಂದೆ ಅಪಘಾತ ಪ್ರಕರಣದ ವಾಹನಗಳನ್ನು ಸಂಚಾರ ಪೊಲೀಸ್‌ ಠಾಣೆಗಳ ಮುಂದೆ ತಿಂಗಳುಗಟ್ಟಲೇ ಇರಿಸಿಕೊಳ್ಳುವುದಿಲ್ಲ. ಘಟನೆ ನಡೆದ 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲೀಕರಿಗೆ ಹಿಂತಿರುಗಿಸಲಾಗುವುದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.

ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಠಾಣೆಗಳ ಮುಂದೆ ತಿಂಗಳು-ವರ್ಷಗಟ್ಟಲೇ ನಿಲ್ಲಿಸಲಾಗುತ್ತಿತ್ತು. ಅದರಿಂದ ಠಾಣೆಯ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಅಪಘಾತ ಪ್ರಕರಣದ ವಾಹನಗಳನ್ನ ಆರ್‌’ಟಿಒ ಅಧಿಕಾರಿಗಳಿಂದ ತ್ವರಿತವಾಗಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕವಾಗಿ ವಾಹನಗಳಲ್ಲಿ ದೋಷವಿದೆಯಾ? ಎಂಬುದನ್ನು ಪತ್ತೆ ಹಚ್ಚಿ ಅಧಿಕಾರಿಗಳಿಂದ ವರದಿ ತರಿಸಿ ಬಳಿಕ ಸಂಬಂಧಪಟ್ಟ ಮಾಲೀಕರನ್ನು ಕರೆಯಿಸಿ ಅವರಿಂದ ಮುಚ್ಚಳಿಕೆ ಬರೆಯಿಸಿ ಹಿಂತಿರುಗಿಸಲಾಗುವುದು ಎಂದರು.

ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌’ಗಳನ್ನು ಹಾಗೂ ಅನಾವಶ್ಯಕ ಹಂಪ್‌’ಗಳಿದ್ದರೆ ಗುರುತಿಸಿ ತೆಗೆಯುವುದಕ್ಕೆ ಸೂಚಿಸಲಾಗಿದೆ. ಜತೆಗೆ ಸಿಗ್ನಲ್‌ ಗಳ ಬಳಿ ಇರುವ ಹಂಪ್‌’ಗಳನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವಶ್ಯಕತೆ ಇರುವ ಕಡೆ ರಬ್ಬರ್‌ ಹಂಪ್‌ ಹಾಕಲು ಸೂಚಿಸಲಾಗಿದೆ. ಸವಾರರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.