ಮನೆ ತಂತ್ರಜ್ಞಾನ ಶೂ ಕ್ಲೀನ್ ಮಾಡಲು ಹೊಸ ಸಾಧನ ಪರಿಚಯಿಸಿದ ಪಿಲಿಪ್ಸ್

ಶೂ ಕ್ಲೀನ್ ಮಾಡಲು ಹೊಸ ಸಾಧನ ಪರಿಚಯಿಸಿದ ಪಿಲಿಪ್ಸ್

0

ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ಯಂತ್ರಗಳನ್ನು ತಂತ್ರಜ್ಞರು ಉತ್ಪಾದನೆ ಮಾಡುತ್ತಲೇ ಇದ್ದಾರೆ. ಅದ್ರಲ್ಲೂ ಇತ್ತೀಚೆಗೆ ಮನೆ ಕ್ಲೀನ್ ಮಾಡುವಂತಹ ಯಂತ್ರಗಳು ಬೇಕಾದಷ್ಟು ಬಂದಿವೆ. ಈಗ ಮನೆಯ ಪಾತ್ರೆಗಳಿಂದ ಹಿಡಿದು ಇಡೀ ಮನೆಯನ್ನು ಕ್ಲೀನ್ ಮಾಡುವಂತಹ ಸಾಧನಗಳು ಬಂದಿದೆ. ಇದೀಗ ಮತ್ತೊಂದು ಅಗತ್ಯವಾದ ಸಾದನವನ್ನು ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿರುವ ಫಿಲಿಪ್ಸ್ ಕಂಪನಿ ಶೂ ಕ್ಲೀನ್ ಮಾಡುವ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸ್ನೀಕರ್ ಕ್ಲೀನರ್ GCA1000/60  ಎಂಬ ಫಿಲಿಪ್ಸ್ ಕಂಪನಿಯಿಂದ ಬಿಡುಗಡೆಯಾದ ಶೂ ಕ್ಲೀನ್ ಮಾಡುವಂತಹ ಸಾಧನವಾಗಿದೆ. ಹ್ಯಾಸಲ್-ಫ್ರೀ ಮತ್ತು ಕೈಗೆಟುಕುವ ಬೆಲೆಯಲ್ಲಿ ಇದು ಉತ್ತಮ ಫೀಚರ್ಸ್ ಅನ್ನು ಇದು ಹೊಂದಿದೆ. ಇದರಲ್ಲಿ ಮೂರು ರೀತಿಯ ಬ್ರಷ್’ಗಳಿವೆ. ಇದು ಶೂವನ್ನು ಉಜ್ಜುವುದು ಮತ್ತು ಸ್ಕ್ರಬ್ಬಿಂಗ್ ಅನ್ನು ಮಾಡುವ ಮೂಲಕ ಶೂ ವನ್ನು ಬಹಳಷ್ಟು ಸ್ವಚ್ಛವಾಗಿರುವಂತೆ ಮಾಡುತ್ತದೆ. ಈ ಯಂತ್ರ ವಾಟರ್ ಪ್ರೂಫ್ ಕೂಡ ಆಗಿದೆ. ಈ ಡಿವೈಸ್ ಒಂದು ರೀತಿಯಲ್ಲಿ ಪಾಕೆಟ್ ಅಲ್ಲಿ ಇಟ್ಟುಕೊಂಡು ಶೂ ಮ್ಯಾನೇಜ್ ಅನ್ನು ಮಾಡಬಹುದು.

ಫಿಲಿಪ್ಸ್ ಕಂಪನಿ ಪರಿಚಯಿಸಿರುವ ಹೊಸ ಸ್ನೀಕರ್ ಕ್ಲೀನರ್ GCA1000/60 ಪೋರ್ಟಬಲ್ ಹ್ಯಾಂಡ್’ಹೆಲ್ಡ್ ಕ್ಲೀನರ್ ಸಾಧನವಾಗಿದೆ. ಇದನ್ನು ಬಳಸುವ ಮೂಲಕ ಶೂಗಳನ್ನು ಬಹಳ ಸುಲಭವಾಗಿ ಸ್ವಚ್ಛಗೊಳಿಸಬಹುದು. ಈ ಮೂಲಕ ನಿಮ್ಮ ಶೂಗಳನ್ನು ಬಹಳಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಶೂಗಳನ್ನು ಮೊದಲಿಗೆ ಕ್ಲೀನ್ ಮಾಡಬೇಕಾದರೆ ಹಳೆಯ ಬಟ್ಟೆಗಳನ್ನು ಅಥವಾ ಬ್ರಶ್’ಗಳನ್ನು ಬಳಸುತ್ತಿದ್ದರು. ಆದರೆ ಇನ್ಮುಂದೆ ಆ ಟೆನ್ಶನ್ ಇಲ್ಲ. ಫಿಲಿಪ್ಸ್ ಕಂಪನಿ ಬಿಡುಗಡೆ ಮಾಡಿದ ಸ್ನೀಕರ್ ಕ್ಲೀನರ್ ಎಂಬ ಡಿವೈಸ್ ಮೂಲಕ ಸುಲಭವಾಗಿ ಶೂ ಕ್ಲೀನ್ ಮಾಡಬಹುದು.

ಈ ಸ್ನೀಕರ್ ಕ್ಲೀನರ್’ನಲ್ಲಿ ಮೂರು ವಿಭಿನ್ನ ಬ್ರಷ್’ಗಳನ್ನು ನೀಡಲಾಗಿದೆ. ಇವುಗಳನ್ನು ಸಾಫ್ಟ್ ಬ್ರಷ್, ಹಾರ್ಡ್ ಬ್ರಷ್ ಮತ್ತು ಸಾಫ್ಟ್ ಸ್ಪಾಂಜ್ ಎಂದು ಹೆಸರಿಸಲಾಗಿದೆ. ಇದರಲ್ಲಿ ಸಾಫ್ಟ್ ಬ್ರಷ್ ಮೆಶ್ ಮತ್ತು ಕ್ಯಾನ್ವಾಸ್’ಗೆ ಸೂಕ್ತವಾಗಿದೆ. ಇನ್ನು ಹಾರ್ಡ್ ಬ್ರಷ್ ಟೆಕ್ಸ್ಚರ್ಡ್ ರಬ್ಬರ್ ಅಥವಾ ಶೂ ನ ಬಾಟಮ್’ಗಳನ್ನು ಕ್ಲೀನ್ ಮಾಡುವುದಕ್ಕೆ ಉತ್ತಮವಾಗಿದೆ. ಹಾಗೆಯೇ ಸಾಫ್ಟ್ ಬ್ರಷ್ ಪಿವಿಸಿ ಮತ್ತು ಸ್ಯೂಡ್ ವಸ್ತುಗಳನ್ನು ಸ್ವಚ್ಛಗೊಳಿಸಲು ಸೂಕ್ತವಾಗಿದೆ.

ಇನ್ನು 4x 6V AA ಬ್ಯಾಟರಿಗಳನ್ನು ಒಳಗೊಂಡಿದೆ. ಒಂದು ಬಾರಿ ಬ್ಯಾಟರಿಯನ್ನು ಅಳವಡಿಸಿದಾಗ 80 ನಿಮಿಷಗಳ ಕಾಲ ರನ್ ಮಾಡಬಹುದು. ಈ ಫಿಲಿಪ್ಸ್’ನ ಸ್ನೀಕರ್ ಕ್ಲೀನರ್ 500RPM ಗಳೊಂದಿಗೆ ಮೋಟರ್ ಅನ್ನು ಹೊಂದಿದೆ. ಇದು IPX5 ವಾಟರ್ ಪ್ರೂಫ್ ಆಗಿರುವ ಸಾಧನವಾಗಿದೆ.

ಫಿಲಿಪ್ಸ್ ಕಂಪನಿಯ ಹೊಸ ಸ್ನೀಕರ್ ಕ್ಲೀನರ್ GCA1000/60 ಭಾರತದಲ್ಲಿ 2,595 ರೂಪಾಯಿ ಬೆಲೆಯನ್ನು ಹೊಂದಿರಲಿದೆ. ಈ ಸಾಧನದ ಮೇಲೆ ಕಂಪನಿ ಎರಡು ವರ್ಷಗಳ ಗ್ಯಾರಂಟಿಯನ್ನು ಕೂಡ ನೀಡುತ್ತದೆ. ಇನ್ನು ಈ ಸ್ನೀಕರ್ ಕ್ಲೀನರ್ ಬ್ಲ್ಯಾಕ್ ಮತ್ತು ಹಳದಿ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇದನ್ನು ಫಿಲಿಪ್ಸ್ ಡೊಮೆಸ್ಟಿಕ್ ಅಪ್ಲೈಯನ್ಸ್ ಎಂಬ ಇ-ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.

ಮೊದಲೆಲ್ಲಾ ಈ ಶೂಗಳನ್ನು ಕ್ಲೀನ್ ಮಾಡುವುದೇ ಒಂದು ದೊಡ್ಡ ಕೆಲಸವಾಗಿತ್ತು. ಆದರೆ ಇದೀಗ ಈ ಕೆಲಸಕ್ಕೆ ಬ್ರೇಕ್ ಹಾಕಲು ಫಿಲಿಪ್ಸ್ ಕಂಪನಿ ನಿರ್ಧರಿಸಿದೆ. ಇದಕ್ಕಾಗಿ ಫಿಲಿಪ್ಸ್ ಕಂಪನಿ ಶೂ ಕ್ಲೀನ್ ಮಾಡುವಂತಹ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದೆ.