ಮನೆ ಆರೋಗ್ಯ ಚಳಿಗಾಲದಲ್ಲಿ ಮನೆಯ ಹಿರಿಯ ಸದಸ್ಯರ ಬಗ್ಗೆ ವಿಶೇಷ ಕಾಳಜಿ ವಹಿಸಿ

ಚಳಿಗಾಲದಲ್ಲಿ ಮನೆಯ ಹಿರಿಯ ಸದಸ್ಯರ ಬಗ್ಗೆ ವಿಶೇಷ ಕಾಳಜಿ ವಹಿಸಿ

0

ಚಳಿಗಾಲದಲ್ಲಿ ವಯಸ್ಸಾದ ವೃದ್ಧರು ಮತ್ತು ಮನೆಯಲ್ಲಿ ಹಿರಿಯ ವ್ಯಕ್ತಿಗಳ ಆರೈಕೆಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಹಿರಿಯ ವ್ಯಕ್ತಿಗಳ ಆರೋಗ್ಯ ಬೇಗ ಹದಗೆಡುತ್ತದೆ. ವಾತಾವರಣದಲ್ಲಿ ಆಗುವ ಬದಲಾವಣೆ ಬೇಗ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ಅನೇಕ ಕಾಯಿಲೆಗಳಿಂದ ತೊಂದರೆ ಅನುಭವಿಸುತ್ತಾರೆ. ತಂಪು ವಾತಾವರಣದಲ್ಲಿ ಹೃದಯ ಸಂಬಂಧಿ ಕಾಯಿಲೆ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ಹೃದ್ರೋಗದಿಂದ ಸಾವಿನ ಅಂಕಿ ಅಂಶ ಹೆಚ್ಚುತ್ತದೆ. ಹಿರಿಯ ವ್ಯಕ್ತಿಗಳ ಹೃದಯವು ಯುವಕರ ಹೃದಯಕ್ಕಿಂತ ಹೆಚ್ಚು ದುರ್ಬಲ ಆಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮನೆಯ ಹಿರಿಯ ಸದಸ್ಯರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗ ಇದ್ದರೆ ಹೆಚ್ಚು ಕೇರ್ ತೆಗೆದುಕೊಳ್ಳಿ. ಆಹಾರ ಮತ್ತು ಆರೋಗ್ಯ ಎರಡರ ಬಗ್ಗೆ ಹೆಚ್ಚು ಕಾಳಜಿ ವಹಿಸಿ..

ದೇಹದ ಉಷ್ಣತೆ ಸಮತೋಲನದಲ್ಲಿಡಲು ಹೃದಯವು ಹೆಚ್ಚು ಸಕ್ರಿಯವಾಗಿರಬೇಕು. ದೇಹದ ಉಷ್ಣತೆಯು 95 ಡಿಗ್ರಿಗಿಂತ ಕಡಿಮೆಯಾದ್ರೆ, ಹೃದಯ ಸ್ನಾಯುಗಳಿಗೆ ಹಾನಿಯಾಗುತ್ತೆ.

ಚಳಿಗಾಲದ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗುವ ಪದಾರ್ಥಗಳು

ಬ್ರೊಕೊಲಿ ಮತ್ತು ಎಲೆಕೋಸು

ಬ್ರೊಕೊಲಿ ಮತ್ತು ಎಲೆಕೋಸು ಎರಡೂ ಅಗತ್ಯ ಪೋಷಕಾಂಶದಿಂದ ತುಂಬಿವೆ. ಚಳಿಗಾಲದಲ್ಲಿ ಇವುಗಳ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೋಂಕು ತಡೆಯುತ್ತದೆ. ಫೈಬರ್, ಕೊಬ್ಬಿನಾಮ್ಲಗಳು, ವಿಟಮಿನ್ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತದೊತ್ತಡ ನಿಯಂತ್ರಿಸಿ, ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡುತ್ತವೆ. ಇದು ಹೃದಯವನ್ನು ದೀರ್ಘಕಾಲ ಆರೋಗ್ಯಕರವಾಗಿಡುತ್ತದೆ. ರಕ್ತನಾಳಗಳ ಹಾನಿ ತಡೆಯುತ್ತದೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಉರಿಯೂತ ಕಡಿಮೆ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಉತ್ಪಾದನೆ ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ ಸಾದ್ಯತೆ ಕಡಿಮೆ ಮಾಡುತ್ತದೆ.

ಸಿಟ್ರಸ್ ಹಣ್ಣು

ಕಿತ್ತಳೆ, ದ್ರಾಕ್ಷಿ, ನಿಂಬೆ ಹಣ್ಣು ಫೈಬರ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಬಿ ವಿಟಮಿನ್ ಪೋಷಕಾಂಶ ಹೊಂದಿವೆ. ಉತ್ಕರ್ಷಣ ನಿರೋಧಕ ಹೊಂದಿವೆ. ಪೋಷಕಾಂಶಗಳು ಹೃದಯದ ಆರೋಗ್ಯ ಕಾಪಾಡುತ್ತವೆ.

ಬೀಟ್ರೂಟ್ ಜ್ಯೂಸ್

ಚಳಿಗಾಲದಲ್ಲಿ ನಿಯಮಿತವಾಗಿ ಬೀಟ್ರೂಟ್ ರಸಸೇವಿಸಿದರೆ ರಕ್ತನಾಳಗಳ ಉರಿಯೂತ ಕಡಿಮೆ ಮಾಡುತ್ತದೆ. ದೇಹದಲ್ಲಿ ನೈಸರ್ಗಿಕವಾಗಿ ಸಂಭವಿಸುವ ನೈಟ್ರಿಕ್ ಆಕ್ಸೈಡ್ ಉತ್ಪಾದನೆ ಹೆಚ್ಚಿಸುತ್ತದೆ. ರಕ್ತನಾಳಗಳು ಶಾಂತವಾಗುತ್ತವೆ. ರಕ್ತದ ಹರಿವು ಇಡೀ ದೇಹ ತಲುಪುತ್ತದೆ. ಹೃದಯ ಸಂಬಂಧಿ ಕಾಯಿಲೆ ಸಾಧ್ಯತೆ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ

ಚಳಿಗಾಲದಲ್ಲಿ ಆಲಿವ್ ಎಣ್ಣೆಯ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆರೋಗ್ಯಕರ ಕೊಬ್ಬು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ರಕ್ತನಾಳಗಳು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಹಕಾರಿ. ತಾಪಮಾನದ ಕುಸಿತವು ರಕ್ತನಾಳಗಳು ಕುಗ್ಗುತ್ತವೆ. ಇದು ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಿಸುತ್ತದೆ. ಆಲಿವ್ ಎಣ್ಣೆ ಸೇವನೆ ಸ್ಯಾಚುರೇಟೆಡ್ ಕೊಬ್ಬನ್ನು ಬದಲಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ಸಮವಾಗಿಸುತ್ತದೆ.