ಮನೆ ರಾಜ್ಯ ಮಂಡ್ಯದಲ್ಲಿ ಜಾನಪದ ಕಲಾ ವೈಭವಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ

ಮಂಡ್ಯದಲ್ಲಿ ಜಾನಪದ ಕಲಾ ವೈಭವಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ

0

ಮಂಡ್ಯ(Mandya): ಕರ್ನಾಟಕ ಜಾನಪದ ಕಾವ್ಯ, ಕಲೆ, ಸಾಹಿತ್ಯದ ತವರೂರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದಿನಿಂದ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತ ಕರ್ನಾಟಕ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಾನಪದ ಕಲೆ ಅಮರವಾಗಿ ಉಳಿಯಲು ರಾಜ್ಯದ ಜಾನಪದ ಕಲಾ ಸಂಸ್ಕೃತಿಗೆ ಇರುವ ಇತಿಹಾಸದ ಕಾರಣದಿಂದ ಹಾಗಾಗಿ ನಾವೆಲ್ಲರೂ ಅದನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಎರಡು ದಿನಗಳ ಈ ಕಾರ್ಯಕ್ರಮದ ಮೂಲಕ ಅದು ಮತ್ತಷ್ಟು ಸಾಕಾರಗೊಳ್ಳಬೇಕು.ಇದಕ್ಕಾಗಿ ಬೇಕಾದ ಎಲ್ಲ ಅಗತ್ಯ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದರು.

ಮಹಿಳಾ ಡೊಳ್ಳು, ವೀರಗಾಸೆ, ತಮಟೆ,ನಾದಸ್ವರ ಸೇರಿದಂತೆ ನೂರಾರು ಕಲಾ ಪ್ರಕಾರಗಳ 400 ಕ್ಕೂ ಅಧಿಕ ಜಾನಪದ ಕಲಾವಿದರು ಸಮ್ಮೇಳನಕ್ಕೆ ಮೆರಗು ತಂದರು. ಇಂದು ಮತ್ತು ನಾಳೆ ವಿವಿಧ ಗೋಷ್ಟಿಗಳು, ನೃತ್ಯ, ಹಾಡುಗಾರಿಕೆ ಮೊದಲಾದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಆದಿ ಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀಮಂತರ ಡಾ.ನಿರ್ಮಲಾ ನಂದನಾಥ ಮಹಾಸ್ವಾಮೀಜಿ,ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ,  ಶಾಸಕ ಎಂ.ಶ್ರೀನಿವಾಸ್,  ಪ್ರೊ.ಎಂ.ಕೃಷ್ಣೆಗೌಡ, ಸಮ್ಮೇಳನಾಧ್ಯಕ್ಷ ಡಾ.ರಾಮೇಗೌಡ, ಜಿಲ್ಲಾಧಿಕಾರಿ ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.