ಮನೆ ಕ್ರೀಡೆ ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯ: ಭಾರತಕ್ಕೆ 227 ರನ್’ಗಳ ಭರ್ಜರಿ ಜಯ

ಬಾಂಗ್ಲಾ ವಿರುದ್ಧದ 3ನೇ ಏಕದಿನ ಪಂದ್ಯ: ಭಾರತಕ್ಕೆ 227 ರನ್’ಗಳ ಭರ್ಜರಿ ಜಯ

0

ಚಿತ್ತಗಾಂಗ್‌: ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್ ಕಿಶಾನ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಜೊತೆಯಾಟದಿಂದ ಭಾರತ 227 ರನ್’ಗಳ ಭರ್ಜರಿ ಜಯ ಗಳಿಸಿದೆ.

ಈ ಪಂದ್ಯದಲ್ಲಿ ಇಶಾನ್‌ ಕಿಶನ್‌ ಅವರು ದ್ವಿಶತಕ (210) ಸಿಡಿಸಿದರೆ, ಕೊಹ್ಲಿ ಶತಕ (113) ಗಳಿಸಿದ್ದಾನೆ.

 ಅಂತಿಮವಾಗಿ ಭಾರತ ತಂಡ 50 ಓವರ್‌’ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 409 ರನ್‌ ಗಳಿಸಿತ್ತು.

ಇದನ್ನು ಬೆನ್ನುಹತ್ತಿದ ಬಾಂಗ್ಲಾ ಪಡೆ 34 ಓವರ್‌’ಗಳಲ್ಲಿ 182ರನ್‌’ಗಳಿಗೆ ಸರ್ವ ಪತನ ಕಂಡಿತು.

ಭಾರತಕ್ಕೆ ರನ್‌ ಅಂತರದಲ್ಲಿ ದಕ್ಕಿದ ಮೂರನೇ ಅತಿದೊಡ್ಡ ಗೆಲುವು ಇದಾಗಿದೆ.

ಮೂರು ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶ 1-2 ರಲ್ಲಿ ಅಂತರದಲ್ಲಿ ಗೆದ್ದುಕೊಂಡಿದೆ.