ಮನೆ ರಾಜಕೀಯ ಗಡಿ ವಿಚಾರವಾಗಿ ನಮ್ಮ ನಿಲುವನ್ನು ಕೇಂದ್ರದ ಮುಂದೆ ತಿಳಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

ಗಡಿ ವಿಚಾರವಾಗಿ ನಮ್ಮ ನಿಲುವನ್ನು ಕೇಂದ್ರದ ಮುಂದೆ ತಿಳಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

0

ಮೈಸೂರು(Mysuru): ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರವಾಗಿ ಗೃಹ ಸಚಿವರು ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ನಾವು ನಮ್ಮ ನಿಲುವಿನ ಬಗ್ಗೆ ತಿಳಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಗಡಿ ವಿವಾದ ವಿಚಾರವಾಗಿ ಎರಡು ರಾಜ್ಯಗಳ ಸಿಎಂಗಳ ಕೇಂದ್ರ ಗೃಹ ಸಚಿವರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನಲ್ಲಿರುವ ವರದಿ, ಗಡಿ ವಿಚಾರದ ಕಾನೂನು ನಿಯಮಗಳನ್ನು ಗೃಹ ಸಚಿವರ ಮುಂದಿಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ನಾನು ಎಲ್ಲಾ ಸಿದ್ಧತೆ ನಡೆಸಿಯೇ ತೆರಳುತ್ತೇನೆ. ಗೃಹ ಸಚಿವರು ಈ ಬಗ್ಗೆ ಪ್ರಸ್ತಾಪ ಮಾಡಿದರೆ ನಾನು ಚರ್ಚಿಸುತ್ತೇನೆ. ಮೊದಲು ಗಡಿ ವಿಚಾರವಾಗಿ ಚರ್ಚೆ ಮಾಡಲು ಆಹ್ವಾನ ನೀಡಿದ್ದಾರೆ ಎಂದರು.

ಚಾಮರಾಜನಗರ ಭೇಟಿಯ ಕುರಿತು ಮಾತನಾಡಿದ ಅವರು, ಚಾಮರಾಜನಗರಕ್ಕೆ ಇದು ನನ್ನ ಮೂರನೇ ಭೇಟಿ, ಹೊಸದೇನಲ್ಲ. ಚಾಮರಾಜನಗರ ಒಂದು ಐತಿಹಾಸಿಕ ನಗರ, ಭೂಮಿ ಎಲ್ಲಾ ಒಂದೆ, ವಿಶೇಷ ಏನೂ ಇಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ ಚಾಮರಾಜನಗರ ಕೂಡ ಒಂದು ಮಹತ್ವದ ಜಿಲ್ಲೆ. ಅಲ್ಲಿಗೆ ಹೋಗಿತ್ತಿದ್ದೇನಷ್ಟೇ, ಬೇರೇನು ನನ್ನ ತಲೆಯಲ್ಲಿಲ್ಲ ಎಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಹೇಳಿದರು.